ರಾಜಕೀಯ

ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಎಚ್ ಡಿಕೆ, ಸಂಪುಟದಲ್ಲಿ ಶಂಕರ್ ಗೆ ಸ್ಥಾನ: ವಿಶ್ವನಾಥ್ ವಿರುದ್ಧ ಚೆಕ್ ಮೇಟ್?

Shilpa D
ಮೈಸೂರು: ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಪಕ್ಷೇತರ ಶಾಸಕ ಆರ್.ಶಂಕರ್ ಅವರಿಗೆ ಸಚಿವ ಸ್ಥಾನ ಕೊಡಿಸುವ ಮೂಲಕ ಜೆಡಿಎಸ್ ನ ಎಚ್. ವಿಶ್ವನಾಥ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ. 
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ನೀಡಿದ ರಾಜಿನಾಮೆಯನ್ನು ವಾಪಸ್ ಪಡೆದುಕೊಂಡಿಲ್ಲ, ಇದೇ ವೇಳೆ ಸಂಪುಟಕ್ಕೆ ಕುರುಬ ಸಮುದಾಯದ ಆರ್. ಶಂಕರ್, ಹಾಗೂ ದಲಿತ ಶಾಸಕ ನಾಗೇಶ್ ಅವರನ್ನು ಸಂಪುಟಕ್ಕೆ ಸೇರಿಸಿದ ಸಿದ್ದರಾಮಯ್ಯ ವಿಶ್ವನಾಥ್ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಜೊತೆಗೆ ಕಾಂಗ್ರೆಸ್  ಮತ್ತು ಜೆಡಿಎಸ್ ಪಕ್ಷಗಳು ತನ್ನ ಬಿಗಿ ಹಿಡಿತದಲ್ಲಿವೆ ಎಂಬುದನ್ನು ಸಿದ್ದರಾಮಯ್ಯ ಸಾಬೀತು ಪಡಿಸಿದ್ದಾರೆ.
ಕಾಂಗ್ರೆಸ್ ನ ಹಲವು ಹಿರಿಯ ನಾಯಕರುಗಳ ಒತ್ತಡವಿದ್ದರೂ, ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ರಾಜ್ಯ ವಿಧಾನಸಭೆಗೆ ಅಗತ್ಯವಾಗಿರು ಸದಸ್ಯರ ಸಂಖ್ಯೆ ಉಳಿಸಿಕೊಳ್ಳು ಸಿದ್ದರಾಮಯ್ಯ ಮಾಡದ ತಂತ್ರಗಾರಿಕೆ ಇದಾಗಿದೆ, 
ತಮ್ಮ ವಿರುದ್ಧ ದನಿ ಎತ್ತಿದ್ದ ಎಚ್.ವಿಶ್ವನಾಥ್, ರೋಷನ್ ಬೇಗ್ ಸೇರಿದಂತೆ ಹಲವು ಹಿರಿಯ ಕಾಂಗ್ರಸ್ಸಿಗರಿಗೆ ಸಿದ್ದರಾಮಯ್ಯ ಈ ಮೂಲಕ ಟಾಂಗ್ ನೀಡಿದ್ದಾರೆ, 
ಕುರುಬ ಸಮುದಾಯದ ಶಂಕರ್ ಅವರ ವಿರುದ್ಧ ವಿಶ್ವನಾಥ್ ಹರಿಹಾಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಶಂಕರ್ ಅವರನ್ನು ಸಂಪುಟಕ್ಕೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ,  ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೇ ಸಿದ್ದರಾಮಯ್ಯ ಅವರು ಸರ್ಕಾರ ಉರುಳಿಸುವ ತಂತ್ರ ನಡೆಸಬಹುದು ಎಂಬ ಭಯದಿಂದಾಗಿ ಸಿಎಂ ಕುಮಾರಸ್ವಾಮಿ ಎಚ್, ವಿಶ್ವನಾಥ್ ಅವರಿಗೆ ಯಾವುದೇ ಸ್ಥಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ.
SCROLL FOR NEXT