ರಾಜಕೀಯ

ಬಿಜೆಪಿ ಸದಸ್ಯತ್ವ ಅಭಿಯಾನ: 1.25ಸದಸ್ಯರನ್ನು ನೋಂದಾಯಿಸುವ ಗುರಿ!

Shilpa D
ಬೆಂಗಳೂರು: 2019ರ ಲೋಕಸಭೆ ಚುನಾವಣೆಯಲ್ಲಿ ಅಭೂತ ಪೂರ್ವ ಗೆಲುವು ಸಾಧಿಸಿರುವ  ಬಿಜೆಪಿ ಮತದಾರರನ್ನು ಕೇಸರಿ ಪಕ್ಷದ ಸದಸ್ಯರನ್ನಾಗಿಸಲು ಮುಂದಾಗಿದೆ,  80 ಲಕ್ಷ ಇರುವ ಸದಸ್ಯರ ಸಂಖ್ಯೆಯನ್ನು 1.25 ಕೋಟಿಗೆ ಏರಿಸಲು ಚಿಂತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಒಳಜಗಳ ಬಿಜೆಪಿಗೆ ಲಾಭವಾಗಿದೆ ಎಂದು ಮೂಲಗಳು ತಿಳಿಸಿವೆ, ಒಬ್ಬರ ಕಾಲನ್ನು ಮತ್ತೊಬ್ಬರ ಕಾಲು ಏಳೆಯುವ ಪರಿಸ್ಥಿತಿಯಲ್ಲಿ ಬಿಜೆಪಿ ಪ್ರಯೋಜನವಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 51.03 ಮತಗಳು ಬಿಜೆಪಿಗೆ ಬಂದಿತ್ತು. ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಬಿಜೆಪಿ ವಿಧಾನ ಪರಿಷತ್ ಸದಸ್ಯ ಎನ್, ರವಿ ಕುಮಾರ್ ಅವರನ್ನು ರಾಜ್ಯದ ಉಸ್ತುವಾರಿಯಾಗಿ ನೇಮಿಸಿದೆ, ಕರ್ನಾಟಕದಲ್ಲಿ ಸದ್ಯ 80ಲಕ್ಷ ಸದಸ್ಯರಿದ್ದು, 1.25 ಕೋಟಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ,
ದೇಶಾದ್ಯಂತ  ಬಿಜೆಪಿ ಸದಸ್ಯರ ಸಂಖ್ಯೆ ಏರಿಸಲು ಪಕ್ಷ ನಿರ್ಧರಿಸಿದೆ ಎಂದು ಶಾಸಕ ಸಿ.ಟಿ ರವಿ ತಿಳಿಸಿದ್ದಾರೆ, ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಿಜೆಪಿ ಪ್ರಾಬಲ್ಯ ಬೆಳೆಸಲು ಯಶಸ್ವಿಯಾಗಿಲ್ಲ, ಆದರೆ ಹಾಸನ, ಮೈಸೂರು, ಮಂಡ್ಯ,ತುಮಕೂರು, ಕೋಲಾರ , ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಚಾಮರಾಜನಗರಗಳಲ್ಲಿ ಬಿಜೆಪಿಗೆ ಅದ್ಭುತ ಪ್ರತಿಕ್ರಿಯೆ ದೊರತಿದೆ.
SCROLL FOR NEXT