ಸುಮಲತಾ ಮತ್ತು ನಿಖಿಲ್ ಕುಮಾರ್
ಮೈಸೂರು: ಮಂಡ್ಯ ಲೋಕಸಭೆ ಕ್ಷೇತ್ರದಿಂದ ರಾಜಕೀಯ ಪ್ರವೇಶ ಮಾಡಬೇಕೆಂದು ಬಹಳ ಆಸೆ ಇಟ್ಟುಕೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಗೆ ಹಿರಿಯ ನಟಿ ಸುಮಲತಾ ಅಂಬರೀಷ್ ದೊಡ್ಡ ತೊಡಕಾಗಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರ್ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಮಂಡ್ಯ ಜೆಡಿಎಸ್ ಕಾರ್ಯಕರ್ತರ ಮಹತ್ವದ ಬೇಡಿಕೆಯಾಗಿದೆ, ಆದರೆ ಅನುಕಂಪದ ಅಲೆ ಮೇಲೆ ಸ್ಪರ್ಧಿಸಲು ಪಣ ತೊಟ್ಟು ನಿಂತಿದ್ದಾರೆ.
ಮಂಡ್ಯ ಲೋಕಸಭೆ ಕ್ಷೇತ್ರದ ಎಲ್ಲಾ ವಿಧಾನಸಭೆ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಇರುವುದರಿಂದ, ಮಂಡ್ಯದಿಂದ ಸ್ಪರ್ಧಿಸಿದರೇ ಗೆಲುವು ಶತಃಸಿದ್ದ ಎಂದು ಗೌಡರ ಕುಟುಂಬ ನಂಬಿದೆ. ಹೀಗಾಗಿ ಮಂಡ್ಯ ಕ್ಷೇತ್ರ ಬಿಟ್ಟುಕೊಡಲು ಜೆಡಿಎಸ್ ಹಿಂಜರಿಯುತ್ತದೆ.
ಮಂಡ್ಯದಲ್ಲಿ ನಿಖಿಲ್ ಕುಮಾರ್ ಸ್ಪರ್ಧೆ ಬಗ್ಗೆ ಸುಮಲತಾ ತಲೆ ಕೆಡಿಸಿಕೊಂಡಿಲ್ಲ, ಹೇಗಾದರಾಗಲಿ, ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಲಿ, ನೀಡದರಲಿ ಪಕ್ಷೇತರವಾಗಾದರೂ ಮಂಡ್ಯ ದಿಂದಲೇ ಕಣಕ್ಕಿಳಿಯಬೇಕೆಂದು ಸುಮಲತಾ ಪಟ್ಟು ಹಿಡಿದಿದ್ದಾರೆ. ಮೈತ್ರಿ ಸರ್ಕಾರದ ಅಂಗ ಪಕ್ಷವಾದ ಜೆಡಿಎಸ್ ಗೆ ಮಂಡ್ಯ ಬಿಟ್ಟುಕೊಡಲು ಕಾಂಗ್ರೆಸ್ ನಿರ್ದರಿಸಿತ್ತು, ಆದರೆ ಮಂಡ್ಯದಿಂದಲೇ ಸ್ಪರ್ಧಿಸಬೇಕೆಂದು ಸುಮಲತಾ ಹಠ ಹಿಡಿದಿರುವುದರಿಂದ ಜೆಡಿಎಸ್ ಗೆ ನುಂಗಲಾರದ ತುತ್ತಾಗಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics