ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿದರೂ ಸುಮಲತಾ ಅಂಬರೀಶ್ ಚುನಾವಣಾ ತಯಾರಿ ಆರಂಭಿಸಿದ್ದಾರೆ.
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ರವಾನಿಸಿರುವ ಸುಮಲತಾ ಅಂಬರೀಶ್, ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕಾಗಿ ಫೋಟೋಗಳನ್ನು ಬಳಸಲು ಫೋಟೋ ಶೂಟ್ ನಡೆಸಿದ್ದಾರೆ.