ಬಾದಾಮಿ: ನನಗೆ ಹಣೆ ಮೇಲೆ ನಾಮ(ತಿಲಕ) ಇಟ್ಟವರನ್ನ ಕಂಡರೆ ಭಯವಾಗುತ್ತೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬಿಜೆಪಿಯನ್ನು ಕಿಚಾಯಿಸಿದ್ದಾರೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕೆಂದೂರು ಕೆರೆಗೆ ನೀರು ತುಂಬಿಸುವ ಯೋಜನೆ ಚಾಲನೆ ನೀಡಿ ಮಾತನಾಡಿದ ಅವರು, ಯಾಕೋ ಗೊತ್ತಿಲ್ಲ ನನಗೆ ಹಣೆಗೆ ಉದ್ದ ನಾಮ ಇಟ್ಟುಕೊಂಡವರನ್ನು ಕಂಡರೆ ಭಯವಾಗುತ್ತದೆ ಎಂದು ಹೇಳಿದ್ದಾರೆ. .
ಪೂಜಾ ಸ್ಥಳಕ್ಕೆ ಆಗಮಿಸುತ್ತಿದಂತೆಯೇ ಗಡಿಬಿಡಿ ಮಾಡಿದ ಅವರು, ‘ಮುಗಿಸಯ್ಯ. ಬೇಗ ಮುಗಿಸಯ್ಯ. ಹೇ ನೀನೇ ಕಾಯಿ ಒಡಿ. ಹೇ ತಾರಯ್ಯ ಇಲ್ಲಿ ಗುದ್ದಲಿ… ಎಂದು ಕಾಮಗಾರಿಗೆ ಚಾಲನೆ ನೀಡಿದರು.