ದೇವೇಗೌಡರ ಕುಟುಂಬ ರಾಜಕಾರಣ 
ರಾಜಕೀಯ

'ಚನ್ನಪಟ್ಟಣ ಗಂಡನಿಗೆ, ರಾಮನಗರ ಹೆಂಡತಿಗೆ: ಒಕ್ಕಲಿಗರಾರು ದೇವೇಗೌಡರಿಗೆ ಕರ್ನಾಟಕವನ್ನು ಜಿಪಿಎ ಬರೆದುಕೊಟ್ಟಿಲ್ಲ'

ದೇವೇಗೌಡರು ತಮ್ಮ ಕುಟುಂಬಕ್ಕೆ ಕ್ಷೇತ್ರವನ್ನು ಹಂಚಿಕೊಡುತ್ತಿದ್ದಾರೆ. ಕರ್ನಾಟಕವೇನು ದೇವೇಗೌಡರ ಅಪ್ಪನ ಮನೆ ಆಸ್ತೀನಾ? ...

ಮೈಸೂರು: ಚನ್ನಪಟ್ಟಣ ಗಂಡನಿಗೆ,ರಾಮನಗರ ಹೆಂಡತಿಗೆ, ಮಂಡ್ಯ ಮಗನಿಗೆ, ಹಾಸನ ಜಿಲ್ಲೆ ಅಣ್ಣಮ ಮಗನಿಗೆ, ಕರ್ನಾಟಕ ಏನು ದೇವೇಗೌಡರ ಅಪ್ಪನ ಮನೆ ಆಸ್ತಿನಾ? ಕರ್ನಾಟಕದ ಒಕ್ಕಲಿಗರು ದೇವೇಗೌಡರ  ಕುಟುಂಬಕ್ಕೆ ಜಿಪಿಎ ಮಾಡಿಕೊಟ್ಟಿಲ್ಲ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಕಿಡಿಕಾರಿದ್ದಾರೆ. 
ಮೈಸೂರಲ್ಲಿ ನಡೆದ ಸಮಾವೇಶ ಮಾತನಾಡಿದ ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ, ದೇವೇಗೌಡರ ಕುಟುಂಬದ್ದು ಪ್ರೈವೇಟ್ ಲಿಮಿಟೆಡ್ ಕಂಪನಿ ಇದ್ದಂತೆ. ವೇದಿಕೆ ಮೇಲಿರುವ ಸಂಸದ ಪ್ರತಾಪ ಸಿಂಹ, ಶಾಸಕ ನಾಗೇಂದ್ರ, ನಾನೂ ಗೌಡರೇ. ನಾವೇನು ಪಾಕಿಸ್ತಾನ, ಆಘಾನಿಸ್ತಾನದಿಂದ ಬಂದಿದ್ದೇವೆಯೇ? ದೇವೇಗೌಡರು ತಮ್ಮ ಕುಟುಂಬಕ್ಕೆ ಕ್ಷೇತ್ರವನ್ನು ಹಂಚಿಕೊಡುತ್ತಿದ್ದಾರೆ. ಕರ್ನಾಟಕವೇನು ದೇವೇಗೌಡರ ಅಪ್ಪನ ಮನೆ ಆಸ್ತೀನಾ? ಒಕ್ಕಲಿಗರಾರು ದೇವೇಗೌಡರಿಗೆ ಜಿಪಿಎ ಬರೆದುಕೊಟ್ಟಿಲ್ಲ ಎಂದು ಹರಿಹಾಯ್ದಿದ್ದಾರೆ.
ಇನ್ನೂ ಇದಕ್ಕೂ ಮೊದಲು ಸಮಾವೇಶ ಉದ್ಘಾಟಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು, ಮಂಡ್ಯ ಜಿಲ್ಲೆಯಲ್ಲಿ ರೈತರು ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಕಾವೇರಿ ಜಲವಿವಾದದಂತಹ ಸೂಕ್ಷ್ಮ ವಿಚಾರಗಳಿವೆ. ಇಂತಹ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಒಬ್ಬ ಸಮರ್ಥ ಅಭ್ಯರ್ಥಿ ಸಿಗಲಿಲ್ವಾ? ದೇವೇಗೌಡರ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಅವರೇ ಅಭ್ಯರ್ಥಿ ಆಗಬೇಕಿತ್ತಾ? ಹಾಸನಕ್ಕೆ ಒಬ್ಬ ಮೊಮ್ಮಗ, ಮಂಡ್ಯದಲ್ಲಿ ಮತ್ತೊಬ್ಬ ಮೊಮ್ಮಗನಿಗೆ ಟಿಕೆಟ್ ಕೊಡ್ತಾರಂತೆ. ಏನ್ರೀ ಇದೆಲ್ಲಾ...? ಎಂದು ಶ್ರೀನಿವಾಸಪ್ರಸಾದ್ ಆಕ್ರೋಶದಿಂದ ವ್ಯಕ್ತ ಪಡಿಸಿದರು. 
ದೇವೇಗೌಡರಿಗೆ ಈಗ 86 ವರ್ಷ. ಮತ್ತೆ ಸಂಸದರಾದರೆ 91 ವರ್ಷದವರೆಗೂ ಸಂಸದರಾಗಿರುತ್ತಾರೆ. ದೇವೇಗೌಡರನ್ನು ಲೋಕಸಭೆಗೆ ಕೈಹಿಡಿದು ಕರೆತರಲು ಈ ಹಿಂದೆ ಸಿ.ಎಸ್.ಪುಟ್ಟರಾಜು, ಚೆಲುವರಾಯಸ್ವಾಮಿ ಇದ್ದರು. ಈಗ ದೇವೇಗೌಡರ ಇಬ್ಬರು ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖಿಲ್ ಈ ಕೆಲಸ ಮಾಡಲಿ ಎಂದು ಅವರಿಗೆ ಟಿಕೆಟ್ ಕೊಡಲು ಹೊರಟಿದ್ದಾರೆ. ದೇವೇಗೌಡರ ಬಗ್ಗೆ ಎಲ್ಲರಿಗೂ ಗೌರವ ಇದೆ. ಆದರೆ, ನಂಬಿಕೆ ಇಲ್ಲ ಎಂದು ಶ್ರೀನಿವಾಸ ಪ್ರಸಾದ್ ಕುಟುಕಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ