ದರ್ಶನ್​, ಸುಮಲತಾ, ಯಶ್ 
ರಾಜಕೀಯ

ದರ್ಶನ್​, ಯಶ್​​​ ನಮ್ಮನೆ ಮಕ್ಕಳು, ಏನೇ ಹೇಳಿದರೂ ಮಾಡ್ತಾರೆ: ಸುಮಲತಾ

ನಟರಾದ ದರ್ಶನ್​​​ ಹಾಗೂ ಯಶ್ ನನ್ನ ಮನೆ ಮಕ್ಕಳು. ನಾನೇನೇ ಕೆಲಸ ಹೇಳಿದರೂ ಅವರು ಯಾವುದೇ ಯೋಚನೆ ಮಾಡದೇ ಮಾಡ್ತಾರೇ....

ಮಂಡ್ಯ: ನಟರಾದ ದರ್ಶನ್​​​ ಹಾಗೂ ಯಶ್ ನನ್ನ ಮನೆ ಮಕ್ಕಳು. ನಾನೇನೇ ಕೆಲಸ ಹೇಳಿದರೂ ಅವರು ಯಾವುದೇ ಯೋಚನೆ ಮಾಡದೇ ಮಾಡ್ತಾರೇ ಎಂದು ಸುಮಲತಾ ಅಂಬರೀಷ್ ಅವರು ಗುರುವಾರ ಹೇಳಿದ್ದಾರೆ.
ಇಂದು ಮಳವಳ್ಳಿಯಲ್ಲಿ ದರ್ಶನ್ ತಮಗೆ ಬೆಂಬಲ ನೀಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸುಮಲತಾ, ದರ್ಶನ್ ಮತ್ತು ಯಶ್ ನಮ್ಮನೆ ಮಕ್ಕಳು. ಅದರಲ್ಲೂ ದರ್ಶನ್​​ ಮಾತ್ರ ನನ್ನ ದೊಡ್ಮಗ ಇದ್ದಂಗೆ, ನಿರೀಕ್ಷೆಗೂ ಮೀರಿ ನನ್ನ ಜೊತೆ ನಿಲ್ತಾನೇ. ಅಭಿಶೇಕ್​​​ಗಿಂತ ಎರಡು ಪಟ್ಟು ನಿರೀಕ್ಷೆ ನನ್ನ ಮೇಲಿಡಿ ಎನ್ನುತ್ತಾನೇ ದರ್ಶನ್​​. ಹೀಗಾಗಿ ಇಬ್ಬರು ಕೂಡ ನನ್ನ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲಿದ್ದಾರೆ ಎಂದರು.
ನಾನು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ನನ್ನ ಹಿಂದೆ ಯಾವುದೇ ಪಕ್ಷ, ಅಧಿಕಾರ ಇಲ್ಲ. ಜನರ ಬೆಂಬಲ ಜತೆಗೆ ಚುನಾವಣೆಗೆ ಹೋಗುತ್ತಿದ್ದೇನೆ. ಯಾರಿಗೂ ತೊಂದರೆ ನೀಡಬಾರದು ಎಂಬುದು ನನ್ನ ಉದ್ದೇಶ. ಹೀಗಾಗಿ ದರ್ಶನ್​​ ಮತ್ತು ಯಶ್​​ ಸೇರಿದಂತೆ ಯಾರೇ ಆಗಲಿ ಶೂಟಿಂಗ್​​ ಇಲ್ಲದ ಸಮಯ ನೋಡಿ ಪ್ರಚಾರಕ್ಕೆ ಕರೆಸಿಕೊಳ್ಳುತ್ತೇನೆ ಎಂದರು.
ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಸುಮಲತಾ ಪರ ಪ್ರಚಾರ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಅಂಬರೀಶ್ ಅವರು ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಿದ್ದೇನೆ. ಈಗಲೂ ಹೋಗುತ್ತೇನೆ. ಸುಮಲತಾ ಪರ ಪ್ರಚಾರ ಮಾಡುವುದು ನನ್ನ ಕರ್ತವ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್