ಸಂಗ್ರಹ ಚಿತ್ರ 
ರಾಜಕೀಯ

ಸುಮಲತಾ ಅಂಬರೀಶ್ ವಿರುದ್ಧ ಎಚ್.ಡಿ. ರೇವಣ್ಣ ಆಕ್ಷೇಪಾರ್ಹ ಹೇಳಿಕೆ: ಸಿಎಂ ಎಚ್ ಡಿಕೆ ಹೇಳಿದ್ದೇನು?

ಆಕ್ಷೇಪಾರ್ಹ ಹೇಳಿಕೆ ನೀಡಿ ಅಂಬಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಎಚ್ ಡಿ ರೇವಣ್ಣ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಸಹೋದರ ಹಾಗೂ ಸಿಎಂ ಎಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿಚ್ಛಿಸಿರುವ ಸುಮಲತಾ ಅಂಬರೀಶ್ ಅವರ ಆಕ್ಷೇಪಾರ್ಹ ಹೇಳಿಕೆ ನೀಡಿ ಅಂಬಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿರುವ ಎಚ್ ಡಿ ರೇವಣ್ಣ ವಿಚಾರ ವ್ಯಾಪಕ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಅವರ ಸಹೋದರ ಹಾಗೂ ಸಿಎಂ ಎಚ್ ಡಿ ಕುಮಾರಸ್ವಾಮಿ ಈ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟಿ ಸುಮಲತಾ ಅಂಬರೀಶ್​ ವಿರುದ್ಧ ಸಚಿವ ಎಚ್​.ಡಿ.ರೇವಣ್ಣ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಯಾರೇ ಆಗಲಿ ಇನ್ನೊಬ್ಬರ ವಿರುದ್ಧ ಸಣ್ಣತನದ ಮಾತನಾಡುವುದು ಸರಿಯಲ್ಲ. ಮಂಡ್ಯದ ವಿಚಾರವನ್ನು ನನಗೆ ಬಿಟ್ಟುಬಿಡಿ. ರೇವಣ್ಣ ಹೇಳಿಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ, ನಮ್ಮ ನಾಯಕರುಗಳಿಗೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಶುಕ್ರವಾರ ದೆಹಲಿಯಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ,  'ಯಾರ ಬಗ್ಗೆಯೇ ಆಗಲಿ ವೈಯಕ್ತಿಕ ಹೇಳಿಕೆ ನೀಡುವುದು ಸರಿಯಲ್ಲ. ರೇವಣ್ಣ ಹೇಳಿಕೆ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ಗಾರೆ.
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಮಂಡ್ಯ ಲೋಕಸಕ್ಷಾ ಕ್ಷೇತ್ರ ಕೂಡ ರಂಗೇರಿದೆ. ಪ್ರಮುಖವಾಗಿ ಸುಮಲತಾ ಅಂಬರೀಶ್ ಅವರ ಸ್ಪರ್ಧೆ ಟಾಕ್ ಆಫ್ ದಿ ಟೌನ್ ಆಗಿದ್ದು, ಈ ಬಾರಿ ಶತಾಯಗತಾಯ ತಾವು ಸ್ಪರ್ಧೆ ಮಾಡಿಯೇ ತೀರುತ್ತೇನೆ ಎಂದು ಸುಮಲತಾ ಅಂಬರೀಶ್ ಈಗಾಗಲೇ ತಮ್ಮ ಪ್ರಚಾರದ ಕಾರ್ಯ ಕೂಡ ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​​​ ಕುಮಾರಸ್ವಾಮಿ ಕಣಕ್ಕಿಳಿದರೇ, ಅತ್ತ ಎದುರಾಳಿಯಾಗಿ ಅಂಬರೀಶ್​​​ ಪತ್ನಿ ಅಖಾಡದಲ್ಲಿದ್ದಾರೆ. ಈ ಮಧ್ಯೆ ಸಿಎಂ ಪುತ್ರನ ರಾಜಕೀಯಕ್ಕೆ ಸುಮಲತಾ ಸ್ಪರ್ಧೆ ಮುಳುವಾಗಲಿದೆ ಎಂದು ಅರಿತ ಜೆಡಿಎಸ್​​ ನಾಯಕರು ನೇರವಾಗಿ ಅಂಬರೀಶ್​​​ ಕುಟುಂಬದ ತೇಜೋವಧೆಗೆ ಮುಂದಾಗಿದ್ದಾರೆ.
ಸದ್ಯ ಸಚಿವ ಎಚ್​​​.ಡಿ ರೇವಣ್ಣನವರು ಸುಮಲತಾ ಅವರ ಬಗ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೀಡಾಗಿದೆ. ಜೆಡಿಎಸ್ ನಾಯಕರ ಈ ಟೀಕೆಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಅಂಬರೀಶ್ ಕುಟುಂಬದ ಸಂಬಂಧಿಕರೇ ಸುಮಲತಾರ ತೇಜೋವಧೆಗೆ ಮುಂದಾಗಿದ್ದ ಸಚಿವ ಡಿ.ಸಿ ತಮಣ್ಣನವರಿಗೆ ಚಳಿ ಬಿಡಿಸಿದ್ದಾರೆ. ಈ ಬೆನ್ನಲ್ಲೇ ಸಚಿವ ಎಚ್​​​.ಡಿ ರೇವಣ್ಣ ಕೂಡ ಮನಬಂದತೆ ಹೇಳಿಕೆ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸುಮಲತಾ ವಿರುದ್ದ ಜೆಡಿಎಸ್ ನಾಯಕರ ವಾಕ್ಸಮರ ಮಿತಿ ಮೀರಿಸಿದೆ. ಮೊದಲಿಗೆ ಜೆಡಿಎಸ್​​ಗೆ ಪಕ್ಷನಿಷ್ಠೆ ಪ್ರದರ್ಶಿಸುವ ಸಲುವಾಗಿ ಸಚಿವ ಡಿ.ಸಿ ತಮ್ಮಣ್ಣ ಅಂಬಿ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡಿದ್ದರು. ಈ ಬೆನ್ನಲ್ಲೇ ಮತ್ತೋರ್ವ ಜೆಡಿಎಸ್​​​ ನಾಯಕ ಮತ್ತು ಸಚಿವ ಎಚ್​​.ಡಿ ರೇವಣ್ಣ ಕೂಡ ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. "ಗಂಡ ಸತ್ತು ಆರು ತಿಂಗಳಾಗಿಲ್ಲ, ಈಕೆಗೆ ಯಾಕೇ ರಾಜಕೀಯ ಬೇಕಿತ್ತು" ಎನ್ನುವ ಮೂಲಕ ಎಚ್​​​.ಡಿ ರೇವಣ್ಣ ಸುಮಲತಾರ ಬಗ್ಗೆ ಸುಖಾಸುಮ್ಮನೇ ವಿವಾದಾತ್ಮಕ ಮಾತುಗಳನ್ನಾಡಿದ್ದಾರೆ.
ಹೀಗಾಗಿ ಒಂದೆಡೆ ಸಚಿವ ರೇವಣ್ಣನವರ ಹೇಳಿಕೆ ವಿರುದ್ಧವಾಗಿ ಅಂಬಿ ಅಭಿಮಾನಿಗಳು ಕೆಂಡಮಂಡಲರಾಗಿದ್ದರೇ, ಇನ್ನೊಂದೆಡೆ ಡಿ.ಸಿ ತಮ್ಮಣ್ಣ ವಿರುದ್ಧ ತಮ್ಮ ಸಂಬಂಧಿಕರೇ ತಿರುಗಿ ಬಿದ್ದಿದ್ದಾರೆ. ಹಿರಿಯರ ಬಾಯಲ್ಲಿ ಈ ರೀತಿಯ ಮಾತು ತರವಲ್ಲ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಅಂಬರೀಶ್​​​ ಕುಟಂಬದ ಜತೆಗೆ ತೆಗೆಸಿಕೊಂಡಿದ್ದ ಡಿ.ಸಿ ತಮ್ಮಣ್ಣ ಅವರ ಫೋಟೊ ಹಾಕಿ, ನೀರು ಕುಡಿಯಲ್ಲು ಹೋಗಿದ್ದವರು ಯಾರು? ಎಂದು ವ್ಯಂಗ್ಯ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!