ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮಲತಾ ಅಂಬರೀಷ್
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸುಮಲತಾ ಅಂಬರೀಷ್ ಈಗಾಗಲೇ ಘೋಷಿಸಿಯಾಗಿದೆ. ಅದರಂತೆ ನಾಳೆ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಫೇಸ್ ಬುಕ್ ಮೂಲಕ ಮನವಿ ಮಾಡಿರುವ ಅವರು, ಮಂಡ್ಯ ಜನತೆಯ ನಿರ್ಧಾರದಂತೆ ಮಂಡ್ಯ ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ನನಗೆ ಧೈರ್ಯ ತುಂಬಲು ನೀವೆಲ್ಲಾ ಬರಬೇಕು, ನಿಮ್ಮೆಲ್ಲರ ಆಗಮನ ನನಗೆ ಶ್ರೀರಕ್ಷೆ ಎಂದು ಅಭಿಮಾನಿಗಳಲ್ಲಿ, ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಅಂಬರೀಷ್ ನಿಧನದ ನಂತರದ ತಮ್ಮ ಜೀವನದಲ್ಲಿ ಎದುರಾದ ಹಠಾತ್ ಕ್ಷಣಗಳು, ಆಗ ಎದುರಿಸಿದ ಪರಿಸ್ಥಿತಿ, ಮಂಡ್ಯ ಜನತೆಯ ಪ್ರೀತಿ ಅಭಿಮಾನಗಳಿಂದ ತಾನು ಇಂದು ಜೀವನದಲ್ಲಿ ಪುಟಿದೇಳಲು ಸಾಧ್ಯವಾಯಿತು ಎಂದು ಸುದೀರ್ಘವಾದ ಪತ್ರವನ್ನು ಸುಮಲತಾ ಬರೆದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos