ಸ್ಪೀಕರ್ ರಮೇಶ್ ಕುಮಾರ್ 
ರಾಜಕೀಯ

ಪುರುಷರೊಂದಿಗೆ ನಾನು ಮಲಗುವುದಿಲ್ಲ, ನನಗೆ ಅಕ್ರಮ ಸಂಬಂಧವಿಲ್ಲ; ಸ್ಪೀಕರ್ ರಮೇಶ್ ಕುಮಾರ್

ಕೋಲಾರದಲ್ಲಿ ಸ್ಪೀಕರ್​ ರಮೇಶ್​ಕುಮಾರ್ ಮತ್ತು ಸಂಸದ ಕೆ.ಎಚ್​.ಮುನಿಯಪ್ಪ ಹೇಳಿಕೆಯೊಂದಕ್ಕೆ...

ಬೆಂಗಳೂರು: ಕೋಲಾರದಲ್ಲಿ ಸ್ಪೀಕರ್​ ರಮೇಶ್​ಕುಮಾರ್ ಮತ್ತು ಸಂಸದ ಕೆ.ಎಚ್​.ಮುನಿಯಪ್ಪ ಹೇಳಿಕೆಯೊಂದಕ್ಕೆ ಸುದ್ದಿಯಾಗಿದ್ದಾರೆ. ನನ್ನ ಮತ್ತು ಸ್ಪೀಕರ್ ರಮೇಶ್ ಕುಮಾರ್ ಸಂಬಂಧ ಗಂಡ ಹೆಂಡತಿ ಸಂಬಂಧದಂತೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಂಸದ ಮುನಿಯಪ್ಪ ಕೋಲಾರ ಜಿಲ್ಲೆಯಲ್ಲಿ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.
ನಾನು ಮತ್ತು ರಮೇಶ್ ಕುಮಾರ್ ಗಂಡ ಹೆಂಡತಿಯಿದ್ದಂತೆ. ನಾವಿಬ್ಬರೂ ಸತಿಪತಿಗಳಂತೆ ಜಗಳವಾಡುತ್ತಿರುತ್ತೇವೆ. ಆದರೆ ಸಂಜೆ ಹೊತ್ತಿಗೆ ಎಲ್ಲಾ ಸರಿಹೋಗಿ ಮತ್ತೆ ಒಂದಾಗುತ್ತೇವೆ ಎಂದಿದ್ದರು.
ಇದಕ್ಕೆ ನಿನ್ನೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸ್ಪೀಕರ್ ರಮೇಶ್ ಕುಮಾರ್, ನನಗೆ ಅನೈತಿಕ ಸಂಬಂಧವಿಲ್ಲ, ಶಾಸ್ತ್ರೋಸ್ತ್ರವಾಗಿ ಸಪ್ತಪದಿ ತುಳಿದು ಮದುವೆಯಾದ ಪತ್ನಿಯೊಂದಿಗೆ ಸಂಸಾರ ನಡೆಸಿಕೊಂಡು ಬಂದಿದ್ದೇನೆ. ನನ್ನ ಮನೆಯಲ್ಲಿಯೇ ನಾನು ಮಲಗುವೆ. ನಾನು ಹಾಗೆ ಬೇರೆಯವರೊಂದಿಗೆ ಗಂಡಸರ ಜೊತೆ ಮಲಗುವುದಿಲ್ಲ, ಅವರಿಗೆ ನನ್ನ ಜೊತೆ ಮಲಗಲು ಇಷ್ಟವಿರಬಹುದು, ಆದರೆ ನನಗಿಲ್ಲ, ನನಗೆ ಯಾರ ಜೊತೆಯೂ ಅಕ್ರಮ ಸಂಬಂಧವಿಲ್ಲ ಎಂದು ಹಾಸ್ಯದ ಧಾಟಿಯಲ್ಲಿ ಉತ್ತರಿಸಿದರು. 
ಕೋಲಾರದಲ್ಲಿ ಏಳು ಬಾರಿ ಗೆದ್ದಿರುವ ಮುನಿಯಪ್ಪಗೆ ಟಿಕೆಟ್ ನೀಡಬಾರದು ಎಂದು ರಮೇಶ್​ಕುಮಾರ್ ಹೈಕಮಾಂಡ್​ ಕದ ತಟ್ಟಿ ಬಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೆ.ಎಚ್.ಮುನಿಯಪ್ಪ, ನಮ್ಮದು ಗಂಡ-ಹೆಂಡತಿ ಸಂಬಂಧ ಎಂದು ಹೇಳಿಕೆ ನೀಡಿದ್ದರು.
ಈ ಬಗ್ಗೆ ಕೇಳಿದಾಗ ರಮೇಶ್ ಕುಮಾರ್, 'ಮುನಿಯಪ್ಪ ಹಾಗೂ ನನ್ನ ನಡುವೆ ಎಲ್ಲ ರೀತಿಯಲ್ಲೂ ಸಂಬಂಧ ಚೆನ್ನಾಗಿದೆ. ಅವರು ದೈವ ಭಕ್ತ, ನಾನೂ ದೈವ ಭಕ್ತ, ನಾನು ಸಾಯಿಬಾಬಾ ಭಕ್ತ, ಅವರು ಸಾಯಿಬಾಬಾ ಭಕ್ತ, ಅವರಿಗೂ ವಯಸ್ಸಾಗಿದೆ, ನನಗೂ ವಯಸ್ಸಾಗಿದೆ, ನಾನು ಕಾಂಗ್ರೆಸ್‌, ಅವರು ಕಾಂಗ್ರೆಸ್‌, ಸಿಕ್ಕಿದಾಗೆಲ್ಲಾ ಏನ್‌ ಸ್ವಾಮಿ ಚೆನ್ನಾಗಿದ್ದೀರಾ ಎನ್ನುತ್ತಾರೆ, ನಾನು ಚೆನ್ನಾಗಿದ್ದೇನೆ ಎಂದು ಉತ್ತರಿಸುತ್ತೇನೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕ್ಷಮೆ ಬೇಕಿಲ್ಲ: ರಾಹುಲ್ ಗಾಂಧಿ

ಪ್ರಶ್ನೆ ಪತ್ರಿಕೆ ಸೋರಿಕೆ ತಡೆ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ!

ಅಯೋಧ್ಯೆಯ ರಾಜರ್ಷಿ ದಶರಥ್ ವೈದ್ಯಕೀಯ ಕಾಲೇಜ್ ನಲ್ಲಿ ಬಾಂಬ್ ತಯಾರಿಕೆ ಕಾಗದ ಪತ್ತೆ; ವಿದ್ಯಾರ್ಥಿ ಬಂಧನ

ಪ್ರಧಾನಿ ಮೋದಿಯನ್ನು ನಿಂದಿಸಿದ 15 ವರ್ಷದ ಹುಡುಗಿ ಹಿಂದೆ 'ಆ ಎರಡು ಗುಂಪುಗಳಿವೆ': ಕಂಗನಾ ಹೊಸ ಬಾಂಬ್!

ಮೋದಿ ಹೇಳಿದ್ದನ್ನು ನಾನು ಒಪ್ಪುತ್ತೇನೆ; ಬಿಜೆಪಿ ನಾಯಕರೂ ಪ್ರಧಾನಿ ಹೇಳಿದಂತೆ ಕೇಳಲಿ; ರಾಜ್ ಠಾಕ್ರೆ