ರಾಜಕೀಯ

ಸುಮಲತಾಗೆ ಕಾಲುನೋವು; ಸಿದ್ದರಾಮಯ್ಯಗೆ ಪ್ರಕೃತಿ ಚಿಕಿತ್ಸೆ; ಆನೆ ಸಾವು ವಿರೋಧಿಸಿ ವಾಟಾಳ್ ಪ್ರತಿಭಟನೆ

Shilpa D
ಬೆಂಗಳೂರು: ಲೋಕಸಭೆ ಚುನಾವಣೆ ಪ್ರಚಾರ ಕಾರ್ಯದಲ್ಲಿ ಬಿಸಿಲಿನಿಂದ ಬಸವಳಿದಿದ್ದ ಕೆಲ ನಾಯಕರು ವಿಶ್ರಾಂತಿ ಮೊರೆ ಹೋಗಿದ್ದಾರೆ. ಕೆಲವರು ವಿದೇಶ ಪ್ರವಾಸಕ್ಕೆ ತೆರಳಿದ್ದರೇ, ಇನ್ನೂ ಕೆಲವರು ಪ್ರಕೃತಿ ಚಿಕಿತ್ಸೆ ಮೊರೆ ಹೋಗಿದ್ದಾರೆ.
ಮಂಡ್ಯ ಲೋಕಸಭೆ ಅಭ್ಯರ್ಥಿ ಸುಮಲತಾ ಅಂಬರೀಷ್ ಮಂಡ್ಯ ಪ್ರಚಾರದಲ್ಲಿ ಪಾಲ್ಗೊಂಡಿದ್ದರು, ಈ ವೇಳೆ ತುಂಬಾ ದೂರ ನಡೆದು ಹೋಗಿದ್ದರಿಂದ ಅವರ ಪಾದಗಳೆಲ್ಲಾ ಬಿರುಕು ಬಿಟ್ಟು ಕಾಲು ಊದಿಕೊಂಡಿದೆ. ಬಿಸಿಲಿಗೆ ಚರ್ಮ ಕಪ್ಪಾಗಿದ್ದು ರಕ್ತ ಹೆಪ್ಪುಗಟ್ಟಿದೆ. ಹೀಗಾಗಿ ತಮ್ಮ ಕಾಲುಗಳಿಗೆ ಚಿಕಿತ್ಸೆ ಪಡೆದುಕೊಳ್ಳುತ್ದಿದ್ದಾರೆ, ನಾನು ವಿಶ್ರಾಂತಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ, ಆದರೆ ಮಾಡುವ ಕೆಲಸ ತುಂಬಾ ಇದೆ ಎಂದು ಹೇಳಿದ್ದಾರೆ.
ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರಕೃತಿ ಚಿಕಿತ್ಸೆ ಮೊರೆ ಹೋಗಿದ್ದಾರೆ.ಎಲ್ಲಾ ರಾಜಕೀಯ ಚಟುವಟಿಕೆಗಳಿಗೂ ಬ್ರೇಕ್ ಹಾಕಿ ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ,
ಇನ್ನೂ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದ್ದಾರೆ, ದಸರಾ ಆನೆ ದ್ರೋಣ ಸಾವನ್ನಪ್ಪಿದ್ದರ ಬಗ್ಗೆ ಶಂಕೆ ವ್ಯಕ್ತ ಪಡಿಸಿರುವ  ವಾಟಾಳ್ ನಾಗರಾಜ್, ಧ್ರೋಣ ಆನೆಯ ಸಾವಿನಲ್ಲಿ ಯಾರದ್ದೋ ಕೈವಾಡವಿದೆ ಎಂದು ಆರೋಪಿಸಿ, ಮೈಸೂರು ಅರಮನೆಯ ಮುಂದೆ ಮಲಗುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ಆನೆ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. 
SCROLL FOR NEXT