ರಾಜಕೀಯ

ಕಾಂಗ್ರೆಸ್ -ಬಿಜೆಪಿಗೆ ಪ್ರತಿಷ್ಠೆಯ ಪಣವಾಗಿದೆ ಉಪಚುನಾವಣೆ: ಪ್ರಚಾರಕ್ಕಾಗಿ ಬೀಡುಬಿಟ್ಟ ಘಟಾನುಘಟಿಗಳು!

Shilpa D
ಬೆಂಗಳೂರು: ಮೇ-19 ರಂದು ನಡೆಯುತ್ತಿರುವ  ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಗೆ ಪ್ರತಿಷ್ಠೆಯ ವಿಷಯವಾಗಿದೆ. ಎರಡು ಪಕ್ಷದ ನಾಯಕರು ಚಾನ್ಸ್ ತೆಗೆದುಕೊಳ್ಳಲು ಬಯಸುತ್ತಿಲ್ಲ, ಎರಡು ಪಕ್ಷದ ನಾಯಕರು ಸಮರಕ್ಕಾಗಿ ಸಿದ್ದರಾಗಿದ್ದಾರೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಪಡೆದುಕೊಂಡಿದ್ದ ಕ್ಷೇತ್ರಗಳನ್ನು ಮತ್ತೆ ವಾಪಸ್ ಪಡೆಯಲು ಕಾಂಗ್ರೆಸ್ ಹವಣಿಸುತ್ತಿದೆ.ಕಾಂಗ್ರೆಸ್ ತನ್ನ ಎಲ್ಲಾ ಮುಖಂಡರನ್ನು  ಎರಡು ಕ್ಷೇತ್ರಗಳ ಪ್ರಚಾರಕ್ಕಾಗಿ ನಿಯೋಜಿಸಿದೆ, ಇನ್ನೂ ಪ್ರಚಾರದಲ್ಲಿ ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಬ್ಬರದ ಪ್ರಚಾರದಲ್ಲಿ ಪಾಲ್ಗೋಂಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಉಪಚುನಾವಣೆ ಪ್ರತಿಷ್ಠೆಯ ವಿಷಯವಾಗಿದೆ ಎಂದು  ಬೀದರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಾವು ಕಾಂಗ್ರೆಸ್ ಗಿಂತ ಭಿನ್ನವಾಗಿ ಪ್ರಚಾರ ಮಾಡುತ್ತಿದ್ದೇವೆ, ನಾವು ಮತದಾರರನ್ನು ನೇರವಾಗಿ ತಲುಪುತ್ತಿದ್ದೇವೆ, ಅವರ ಕಾಂಗ್ರೆಸ್ ಗೆ ಮತ ಹಾಕುವುದಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಂಎಲ್ ಸಿ ರವಿ ಕುಮಾರ್ ಹೇಳಿದ್ದಾರೆ.
ಕುಂದಗೋಳದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್, ಪ್ರಚಾರದ ಹೊಣೆ ಹೊತ್ತಿದ್ದಾರೆ.ಇನ್ನೂ ಸಿಎಂ ಕುಮಾರಸ್ವಾಮಿ ಕೂಡ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ, ಇನ್ನೂ ಬಿಜೆಪಿ ಅಭ್ಯರ್ಥಿ ಪರ ಜಗದೀಶ್ ಶೆಟ್ಟರ್, ಕೆ.ಎಸ್ ಈಶ್ವರಪ್ಪ, ವಿ. ಸೋಮಣ್ಣ, ಪ್ರಚಾರದಲ್ಲಿ ಪಾಲ್ಗೋಳ್ಳಲಿದ್ದಾರೆ.
SCROLL FOR NEXT