ರಾಜಕೀಯ

ನನ್ನ ಪುತ್ರಿ ಪಿಯುಸಿಯಲ್ಲಿ ಫೇಲ್‌ ಆಗಲು ಕಾಂಗ್ರೆಸ್ ನಾಯಕರೇ ಕಾರಣ: ಉಮೇಶ್ ಜಾಧವ್

Shilpa D
ಕಲಬುರಗಿ: ತಮ್ಮ ಮಗಳು ಪಿಯುಸಿಯಲ್ಲಿ ಅನುತ್ತೀರ್ಣಳಾಗಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿರುವ ಚಿಂಚೋಳಿ ಮಾಜಿ ಶಾಸಕ ಉಮೇಶ್ ಜಾಧವ್, ತಾವು ಬಿಜೆಪಿ ಮಾರಾಟವಾಗಿರುವುದಾಗಿ ಪದೇ-ಪದೇ ಕಾಂಗ್ರೆಸ್ ನಾಯಕರು ಆರೋಪ ಮಾಡಿದ್ದರಿಂದ ಪುತ್ರಿ ಮಾನಸಿಕವಾಗಿ ನೊಂದಿದ್ದಳು ಎಂದು ಆಪಾದಿಸಿದ್ದಾರೆ.
ಚಿಂಚೋಳಿಯ ಚಂದಾಪುರದ ನಿವಾಸದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು, ಉಮೇಶ್ ಜಾಧವ್ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ‌‌ ಹಿನ್ನೆಲೆಯಲ್ಲಿ ನನ್ನ ಮಗಳಿಗೆ ಕಾಲೇಜಿನಲ್ಲಿ ಅಪಮಾನವಾಗಿದೆ. ನಮ್ಮ ಕುಟುಂಬ ಕೂಡ ನೊಂದಿದೆ. ಆಕೆಯ ಸ್ನೇಹಿತರು 'ನಿನ್ನ ತಂದೆ ಮಾರಾಟವಾಗಿದ್ದಾರೆ' ಎಂದು ಅವಮಾನಿಸುತ್ತಿದ್ದರು. ಇದು ಆಕೆಯ ಮೇಲೆ ದುಷ್ಪರಿಣಾಮ ಬೀರಿದೆ. ಪಿಯುಪಿಯಲ್ಲಿ ಫೇಲ್ ಆಗಲು ಕಾಂಗ್ರೆಸ್ ನಾಯಕರೇ ಕಾರಣ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ನಾಯಕರು ನಾನು ಹಣ ತಗೆದುಕೊಂಡಿದ್ದೇನೆ ಎಂದು ನನ್ನ ವಿರುದ್ಧ ವೈಯಕ್ತಿಕ ಆರೋಪಗಳನ್ನು ಮಾಡುತ್ತಿದ್ದಾರೆ. ಉತ್ತಮವಾಗಿ ಓದುತ್ತಿದ್ದ ಆಕೆ ಮಾನಸಿಕವಾಗಿ ಕುಗ್ಗಿದ್ದು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಇದಕ್ಕೆಲ್ಲಾ ಕಾಂಗ್ರೆಸ್ ನಾಯಕರು ಆರೋಪವೇ ಕಾರಣ ಎಂದು ದೂರಿದ್ದಾರೆ.
ಇಂಜೆಕ್ಷೆನ್  ನಲ್ಲಿ ನೀರು ಹಾಕುತ್ತಿದ್ದರೋ, ಔಷಧ ಹಾಕುತ್ತಿದ್ದರೋ ಎಂದು ಲೇವಡಿ ಮಾಡುವ ಮೂಲಕ ಡಾ  ಪರಮೇಶ್ವರ್ ವೈದ್ಯ ವೃತ್ತಿಗೆ ಅಪಮಾನ ಮಾಡಿದ್ದಾರೆ. ನನ್ನ ಜೀವನದಲ್ಲಿ ಒಂದು ಕಳಂಕ ಇಲ್ಲ. ನಾನು ನನ್ನ ಡಾಕ್ಟರ್ ಹುದ್ದೆಗೆ ರಾಜೀನಾಮೆ ನೀಡಿ ಬರುವಾಗ 200 ಜನ ನನ್ನ ಸಹೋದ್ಯೋಗಿಗಳು ಕಣ್ಣೀರಿಟ್ಟಿದ್ದರು. ಕೀಳು ಮಟ್ಟದ ಹೇಳಿಕೆಯನ್ನು ನೀಡುವ ಮೂಲಕ ಡಾ  ಪರಮೇಶ್ವರ್ ಅತ್ಯಂತ ಕೆಳಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚಿಂಚೋಳಿ  ಕ್ಷೇತ್ರದಲ್ಲಿ ಒಗ್ಗಟ್ಟಾಗಿದ್ದ ಬಂಜಾರ ಸಮುದಾಯವನ್ನು ಒಡೆಯುವಂತಹ ಕಾರ್ಯಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಜಾತಿ ಒಡೆಯುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ನಮ್ಮ ಬಂಜಾರ ಸಮುದಾಯವನ್ನು ಒಡೆಯುವ ಪಾಪದ ಕೆಲಸಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇದನ್ನು ಬಿಟ್ಟು ನನ್ನ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲಿ, ಕುತಂತ್ರ ಮಾಡುವ ಬದಲು ನನ್ನ ಸವಾಲನ್ನು ಎದುರಿಸಿ ಎಂದರು. 
ನಮ್ಮ ದೇಶದ ಶ್ರೀಮಂತ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ. 50 ಸಾವಿರ ಕೋಟಿ ಒಡೆಯ.ಅವರ ಮೇಲೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ.ಆದರೆ ಈ ವಿಷಯವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿಡಲಾಗಿದೆ ಎಂದು ಹೇಳಿದರು.
SCROLL FOR NEXT