ರಾಜಕೀಯ

ದೇಶ ವಿಭಜಿಸಿದ್ದು ಯಾರು, ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ಪ್ರಶ್ನೆ

Sumana Upadhyaya
ಬೆಂಗಳೂರು: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಬಿಜೆಪಿ ಹಾಗೂ ನರೇಂದ್ರ ಮೋದಿಯವರು ಇರಲಿಲ್ಲ.ಆಗ ದೇಶ ವಿಭಜನೆ ಮಾಡಿದ್ದು ಯಾರು ಎಂದು ಕಾಂಗ್ರೆಸ್ ನಾಯಕರನ್ನು ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಭಾರತದ ಪ್ರಧಾನ ವಿಭಜಕ ಎಂಬ ಶೀರ್ಷಿಕೆಯಡಿ ಟೈಮ್ ವಾರಪತ್ರಿಕೆ ಪ್ರಕಟಿಸಿರುವ ತಲೆಬುಡವಿಲ್ಲದ ಲೇಖನದ ಬಗ್ಗೆ ಕಾಂಗ್ರೆಸ್ ನಾಯಕರು ಸಂಭ್ರಮಿಸುತ್ತಿರುವ ಪರಿಯನ್ನು ಅವರು ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.
ಅಮೆರಿಕಾದ ಟೈಮ್ ನಿಯತಕಾಲಿಕೆ ತನ್ನ ಇತ್ತೀಚಿನ ಸಂಚಿಕೆಯಲ್ಲಿ ಭಾರತದ ಪ್ರಧಾನ ವಿಭಜಕ ಎಂಬ ಶೀರ್ಷಿಕೆಯಡಿ ಲೇಖನ ಪ್ರಕಟಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಟೀಕಿಸಿತ್ತು.
ಇನ್ನು ಮೈತ್ರಿ ಸರ್ಕಾರ ಬೀಳಿಸಲು ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರ ಬೀಳಿಸಲು ಯಾರೂ ಪ್ರಯತ್ನ ಮಾಡುವುದು ಬೇಡ. ಈ ಸರ್ಕಾರಕ್ಕೆ ಆಪರೇಷನ್ ಮತ್ತು ಅಬಾರ್ಶನ್ ಎರಡು ನೀವೇ ಮಾಡೋದು ಎಂದು ತಿರುಗೇಟು ಕೊಟ್ಟಿದ್ದಾರೆ.
SCROLL FOR NEXT