ರಾಜಕೀಯ

ಜಮ್ಮುವಿನಲ್ಲೂ ಚರ್ಚೆಗೆ ಗ್ರಾಸವಾದ ರಾಜ್ಯ ರಾಜಕಾರಣ; ಪರಮೇಶ್ವರ್ ಹೇಳಿಕೆಗೆ ಒಮರ್ ಅಬ್ದುಲ್ಲಾ ಪ್ರತಿಕ್ರಿಯೆ

Nagaraja AB

ಶ್ರೀನಗರ: ಕರ್ನಾಟಕ ರಾಜ್ಯ ರಾಜಕಾರಣ ಹಾಗೂ ಸರ್ಕಾರದ ಅಸ್ಥಿರತೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ರಾಜ್ಯದ ಆಡಳಿತಾರೂಢ ಮಿತ್ರಪಕ್ಷಗಳ ಚುನಾವಣೋತ್ತರ ಆತ್ಮಾವಲೋಕನಾ ಸಭೆಗೆ ಜಮ್ಮುಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ರಾಜ್ಯ ಸಂಪುಟ ವಿಶ್ವಾಸವಿರಿಸಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಜಮ್ಮು ಕಾಶ್ಮೀರದ ರಾಷ್ಟ್ರೀಯ ಕಾನ್ಫರೆನ್ಸ್ (ಎನ್ ಸಿ ) ಉಪಾಧ್ಯಕ್ಷ ಒಮರ್ ಅಬ್ದುಲ್ಲಾ'ಆಡಳಿತದ ಮೇಲೆ ಸಂಪುಟದ ನಂಬಿಕೆ, ವಿಶ್ವಾಸವೇ ಅಂತಿಮ' ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಎಷ್ಟು ಸಮಯದ ಹಿಂದೆ 8-10 ಶಾಸಕರು ಆಡಳಿತದ  ಮೇಲೆ ನಂಬಿಕೆ ಕಳೆದುಕೊಂಡು, ತಮ್ಮದೇ ಮಾರ್ಗ ಆರಿಸಿಕೊಂಡಿದ್ದಾರೆ? ಆದರೆ, ಯಾವುದೇ ಆಡಳಿತದ ಮೇಲೆ ಸಂಪುಟದ ನಂಬಿಕೆ, ವಿಶ್ವಾಸವೇ ಅಂತಿಮ' ಎಂದಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇಂದು ನಡೆದ ಮೈತ್ರಿಕೂಟದ ಸಭೆಯಲ್ಲಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಡಳಿತದ ಮೇಲೆ ಸಂಪುಟಕ್ಕೆ ನಂಬಿಕೆಯಿದೆ. ರಾಜ್ಯದಲ್ಲಿ ಕಾಂಗ್ರೆಸ್ -ಜೆಡಿಎಸ್ ಮೈತ್ರಿಕೂಟ ಮುಂದುವರಿಯಲಿದೆ. ಅದನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಸಫಲವಾಗುವುದಿಲ್ಲ ಎಂದಿದ್ದರು.
SCROLL FOR NEXT