ಎಚ್ ವಿಶ್ವನಾಥ್ 
ರಾಜಕೀಯ

ಪಠ್ಯದಿಂದ ಟಿಪ್ಪು ಅಧ್ಯಾಯ ಕೈಬಿಟ್ಟರೂ ಇತಿಹಾಸ ಅಳಿಸಲಾಗದು: ಎಚ್.ವಿಶ್ವನಾಥ್

ಟಿಪ್ಪು ಸುಲ್ತಾನ್​ ಮೈಸೂರಿನ ಹುಲಿ. ಟಿಪ್ಪು ಏನು ಎಂಬುದು ಶ್ರೀರಂಗಪಟ್ಟಣ, ಶೃಂಗೇರಿ ಹಾಗೂ ದೇವನಹಳ್ಳಿಯಲ್ಲಿ ಕಾಣಿಸುತ್ತದೆ ಎಂದು ಅನರ್ಹ ಶಾಸಕ ಎಚ್​.ವಿಶ್ವನಾಥ್​ ರಾಜ್ಯ ಸರ್ಕಾರದ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರು: ಟಿಪ್ಪು ಸುಲ್ತಾನ್​ ಮೈಸೂರಿನ ಹುಲಿ. ಟಿಪ್ಪು ಏನು ಎಂಬುದು ಶ್ರೀರಂಗಪಟ್ಟಣ, ಶೃಂಗೇರಿ ಹಾಗೂ ದೇವನಹಳ್ಳಿಯಲ್ಲಿ ಕಾಣಿಸುತ್ತದೆ ಎಂದು ಅನರ್ಹ ಶಾಸಕ ಎಚ್​.ವಿಶ್ವನಾಥ್​ ರಾಜ್ಯ ಸರ್ಕಾರದ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಐತಿಹಾಸಿಕ ವ್ಯಕ್ತಿ. ಅವರ ಬಗ್ಗೆ ಈಗ ರಾಜಕೀಯವಾಗಿ ವಿಶ್ಲೇಷಣೆ ಮಾಡುವುದು ತಪ್ಪು. ಇತಿಹಾಸ ಎಂದ ಮೇಲೆ ನಾಯಕರೂ ಇರುತ್ತಾರೆ, ಖಳನಾಯಕರೂ ಇದ್ದೇ ಇರುತ್ತಾರೆ ಎಂದರು.

ಟಿಪ್ಪು ಇತಿಹಾಸ ಬೇರೆ, ಮೈಸೂರು ಮಹಾರಾಜರ ಇತಿಹಾಸವೇ ಬೇರೆ. ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ತೆಗೆದು ಹಾಕಿದರೆ ಇತಿಹಾಸ ಸಾಯುವುದಿಲ್ಲ ಎನ್ನುವ ಮೂಲಕ, ಟಿಪ್ಪು ಸುಲ್ತಾನ್ ವಿಚಾರವನ್ನು ಪಠ್ಯದಿಂದ ತೆಗೆದು ಹಾಕಿದರೂ ಟಿಪ್ಪು ಇತಿಹಾಸ ಅಳಿಸಲಾಗದು ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಟಿಪ್ಪುವಿನ ಬಗ್ಗೆ ಹಲವು ಮಂದಿ ಪುಸ್ತಕ ಬರೆದಿದ್ದಾರೆ. ಬೇಕಾದಷ್ಟು ಪುಸ್ತಕಗಳು ಲಭ್ಯವಿದೆ. ಹೀಗಾಗಿ ರಾಜ್ಯ ಸರ್ಕಾರ ಪಠ್ಯ ಪುಸ್ತಕದಿಂದ ಇತಿಹಾಸ ತೆಗೆಯುವುದು ಸರಿಯಲ್ಲ. ಟಿಪ್ಪುವಿಗೂ ಉಪಚುನಾವಣೆಗೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!