ರಾಜಕೀಯ

ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಿಗೆ ಅವಕಾಶ:ಅನರ್ಹ ಶಾಸಕರು ಹರ್ಷ

Sumana Upadhyaya

ಬೆಂಗಳೂರು: ಅನರ್ಹ ಶಾಸಕರು ಬುಧವಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ. 


ಹಿಂದಿನ ವಿಧಾನಸಭೆ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಅನರ್ಹ ಶಾಸಕರಿಗೆ ಪ್ರಸಕ್ತ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನೀಡಲಾಗಿದ್ದ ನಿರ್ಬಂಧವವನ್ನು ತಳ್ಳಿಹಾಕಿದೆ. ಪ್ರಸಕ್ತ ವಿಧಾನಸಭಾ ಅವಧಿ 2023ಕ್ಕೆ ಮುಗಿಯಲಿದೆ.


ಚುನಾವಣೆಯಲ್ಲಿ ಸ್ಪರ್ಧಿಸಲು ಸುಪ್ರೀಂ ಕೋರ್ಟ್ ಅನುವು ಮಾಡಿಕೊಟ್ಟಿದ್ದು ನಮಗೆ ಮುಖ್ಯವಾಗುತ್ತದೆ. ನಾವು ರಾಜಕೀಯ ವ್ಯಕ್ತಿಗಳಾಗಿರುವುದರಿಂದ ನಮಗೆ ಈ ತೀರ್ಪು ಮುಖ್ಯವಾಗುತ್ತದೆ ಎಂದು ಜೆಡಿಎಸ್ ನ ಅನರ್ಹ ಶಾಸಕ ಎಎಚ್ ವಿಶ್ವನಾಥ್ ದೆಹಲಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.


ಯಾವ ಪಕ್ಷದಿಂದ ಸ್ಪರ್ಧಿಸುತ್ತೀರಿ ಎಂದು ಕೇಳಿದಾಗ ವಿಶ್ವನಾಥ್ ಪ್ರತಿಕ್ರಿಯಿಸಲಿಲ್ಲ. ಇತರ ಅನರ್ಹ ಶಾಸಕರಾದ ಬಿ ಸಿ ಪಾಟೀಲ್, ಪ್ರತಾಪ್ ಗೌಡ ಪಾಟೀಲ್ ಮತ್ತು ಕೆ ಗೋಪಾಲಯ್ಯ ಇದೇ ರೀತಿಯ ಅಭಿಪ್ರಾಯ ಹೇಳಿದ್ದಾರೆ. 


ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದ್ದು ನಾಮಪತ್ರ ಸಲ್ಲಿಸಲು ಇದೇ 18 ಕೊನೆಯ ದಿನ. 

SCROLL FOR NEXT