ರಾಜಕೀಯ

ಆದಾಯ ತೆರಿಗೆ,ಇಡಿಯಿಂದ ಬಚಾವಾಗಲು ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆ- ಶರತ್ ಬಚ್ಚೇಗೌಡ

Nagaraja AB

ಬೆಂಗಳೂರು​: ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ಅವರ ಕ್ಷೇತ್ರದಲ್ಲಿನ ಉಪ ಚುನಾವಣಾ ಕಣ ರಂಗು ಪಡೆದುಕೊಂಡಿದೆ. ಪಕ್ಷೇತರ ಅಭ್ಯರ್ಥಿ ಶರತ್  ಬಚ್ಚೇಗೌಡ ಅವರ ಸ್ಪರ್ಧೆಯಿಂದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿದೆ. 

ಬೆಂಗಳೂರು ಗ್ರಾಮಾಂತರದ ಆನೇಕಲ್​ ನಲ್ಲಿ ಮಾತನಾಡಿದ ಶರತ್ ಬಚ್ಚೇಗೌಡ,  ಅನರ್ಹ ಶಾಸಕ ಎಂಟಿಬಿ ನಾಗರಾಜ್​ ಅವರಿಗೆ ಕಾಂಗ್ರೆಸ್ ಪಕ್ಷ​ ಎಲ್ಲವನ್ನೂ ಕೊಟ್ಟಿದೆ. ಆದರೀಗ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಿಂದ ಬಚಾವಾಗಲು ಬಿಜೆಪಿ ಪಕ್ಷ ಸೇರಿದ್ದಾರೆ ಎಂದರು. 

ಅನರ್ಹ ಶಾಸಕ ಎಂಟಿಬಿ ನಾಗ ರಾಜ್​ ಒಬ್ಬ ಮೋಸ ಗಾರ,ಮನೆ ಮುರುಕ ಎಂದು ಜನ ಹೇಳುತ್ತಿದ್ದರು.ಅದಕ್ಕೆ ತಾಜಾ ಉದಾಹರಣೆ ನನ್ನ ಕುಟುಂಬ.ತಮ್ಮ ಕುತಂತ್ರದಿಂದ ಅಪ್ಪ-ಮಗನನ್ನೇ ದೂರ ಮಾಡಿಬಿಟ್ಟರು ಎಂದು ಆರೋಪಿಸಿ ದರು.

ಎಂಟಿಬಿ ನಾಗರಾಜ್ ಸ್ವಾರ್ಥಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಸ್ವಾರ್ಥವನ್ನು ತಿರಸ್ಕರಿಸಿ , ಸ್ವಾಭಿಮಾನಕ್ಕೆ ಮತ ನೀಡಬೇಕೆಂದು ಮತದಾರರಲ್ಲಿ ಅವರು ಮನವಿ ಮಾಡಿಕೊಂಡರು. 

ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ, ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರಿಗೆ ಜೆಡಿಎಸ್ ಬೆಂಬಲ ನೀಡಿದೆ.

SCROLL FOR NEXT