ರಾಜಕೀಯ

ಮಹಾಲಕ್ಷ್ಮೀ ಲೇಔಟ್ ಜೆಡಿಎಸ್ ಅಭ್ಯರ್ಥಿ ಘೋಷಣೆ, ಎಂಎಲ್ ಸಿ ಬೆಮೆಲ್‌ ಕಾಂತರಾಜು ಕಣಕ್ಕೆ

Lingaraj Badiger

ಬೆಂಗಳೂರು: ತೀವ್ರ ಕುತೂಹಲ‌ ಕೆರಳಿಸಿದ್ದ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್ ಕೊನೆಗೂ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ವಿಧಾನ ಪರಿಷತ್ ಸದಸ್ಯ ಬಿಇಎಂಎಲ್ ಕಾಂತರಾಜು ಅವರ ಹೆಸರನ್ನು ಅಖೈರುಗೊಳಿಸಿದೆ.

ಪಕ್ಷಕ್ಕೆ ದ್ರೋಹವೆಸಗಿ ಮೈತ್ರಿ ಸರ್ಕಾರ ಪತನಕ್ಕೆ ಕಾರಣವಾಗಿರುವ ಅನರ್ಹ ಶಾಸಕ ಗೋಪಾಲಯ್ಯ ಅವರನ್ನು ಉಪಚುನಾವಣೆಯಲ್ಲಿ ಸದೆಬಡಿಯಲು ಜೆಡಿಎಸ್ ವರಿಷ್ಠರು ರಣತಂತ್ರ ರೂಪಿಸಿದ್ದಾರೆ. ಗೋಪಾಲಯ್ಯ ವಿರುದ್ಧ ಸರಿದೂಗಬಲ್ಲ ಅಭ್ಯರ್ಥಿಗಾಗಿ ಅಳೆದು ತೂಗಿ ಹುಡುಕಾಟ ನಡೆಸಿದ್ದರು. 

ಕಾಂಗ್ರೆಸ್ ಗೆ ರಾಜೀನಾಮೆ ನೀಡಿರುವ ಡಾ.ಗಿರೀಶ್ ನಾಶಿ ಅವರನ್ನು ಈ ಮೊದಲು ಅಭ್ಯರ್ಥಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿತ್ತಾದರೂ ಇನ್ನೋರ್ವ ಆಕಾಂಕ್ಷಿಯಾಗಿದ್ದ ಮಾಜಿ ಮೇಯರ್ ಭದ್ರೇಗೌಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇಬ್ಬರನ್ನೂ ಮನವೊಲಿಸುವ ಪ್ರಯತ್ನ ನಡೆಸಲಾಗಿತ್ತಾದರೂ ಅದು ಸಫಲವಾಗಲಿಲ್ಲ. ಅಲ್ಲದೇ ಗಿರೀಶ್ ನಾಶಿ ಕ್ಷೇತ್ರದ ಜನರಿಗೆ ಅಷ್ಟಾಗಿ ಪರಿಚಯವೂ ಇಲ್ಲ. ಕೊನೆಕ್ಷಣದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದು, ಕೊನೆಯ ಹಂತದಲ್ಲಿ ಮತಗಳಿಕೆ ಸಾಧ್ಯವಿಲ್ಲ ಎಂಬ ಲೆಕ್ಕಾಚಾರವನ್ನು ಶುಕ್ರವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಚರ್ಚಿಸಲಾಯಿತು‌. ಮತ್ತೊಂದು ಕಡೆ ಬಿಜೆಪಿಯ ಗೋಪಾಲಯ್ಯ ಸಾಕಷ್ಟು ಬಲಶಾಲಿಯಾಗಿದ್ದು ಗೋಪಾಲಯ್ಯಗೆ ಎದಿರೇಟು ನೀಡಬಲ್ಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವುದು ಮುಖ್ಯ ಮತ್ತು ಕ್ಷೇತ್ರವನ್ನು‌ ಮತ್ತೊಮ್ಮೆ ವಶಕ್ಕೆ ಪಡೆಯಲು ಮೇಲ್ಮನೆ ಸದಸ್ಯ ಕಾಂತರಾಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿದೆ‌.

SCROLL FOR NEXT