ಎಚ್.ಡಿ ದೇವೇಗೌಡ 
ರಾಜಕೀಯ

'ಜೆಡಿಎಸ್ ಸ್ಟಾರ್ ಪ್ರಚಾರಕರಲ್ಲಿ 8 ಜನ ಗೌಡರ ಕುಟುಂಬದವರು'

ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗಾಗಿ ಜೆಡಿಎಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು. 12 ಜನ ಸ್ಟಾರ್ ಪ್ರಚಾರಕರಲ್ಲಿ 8 ಮಂದಿ ದೇವೇಗೌಡರ ಕುಟುಂಬದವರೇ ಆಗಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಲೇವಡಿ ಮಾಡಿದ್ದಾರೆ.

ಬೆಂಗಳೂರು: ಡಿಸೆಂಬರ್ 5 ರಂದು ನಡೆಯುವ ಉಪ ಚುನಾವಣೆಗಾಗಿ ಜೆಡಿಎಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು. 12 ಜನ ಸ್ಟಾರ್ ಪ್ರಚಾರಕರಲ್ಲಿ 8 ಮಂದಿ ದೇವೇಗೌಡರ ಕುಟುಂಬದವರೇ ಆಗಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಲೇವಡಿ ಮಾಡಿದ್ದಾರೆ.

ಅಥಣಿ ಮತ್ತು ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಲವಂತವಾಗಿ ಹಿಂದೆ ಸರಿದಿಲ್ಲ, ಒಂದು ಪಕ್ಷದಿಂದ ಟಿಕೆಟ್ ಪಡೆದು ನಿಂತವರನ್ನ ವಾಪಸ್ ತೆಗೆಸೋಕೆ ಅವರೇನು ಎಳೆಮಕ್ಕಳಾ? ಈ ಹಿಂದೆ ರಾಮನಗರದಲ್ಲಿ ಚಂದ್ರಶೇಖರ್ ನನ್ನ ಕಣದಿಂದ ಹಿಂದೆ ಸರಿಸಿದವರ್ಯಾರು? ಈ ರೀತಿಯಾದ ಕೆಲಸಗಳನ್ನು ಬಿಜೆಪಿ ಮಾಡೊಲ್ಲ ಅಂತಾ ದೇವೇಗೌಡರ ವಿರುದ್ಧ ಸದಾನಂದ ಗೌಡ ಹರಿಹಾಯ್ದಿದ್ದಾರೆ.

ನಂದಿನಿ ಲೇಔಟಿನಲ್ಲಿ ಗೋಪಾಲಯ್ಯ ಪರ ಪ್ರಚಾರದ ವೇಳೆ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ಗೋಪಾಲಯ್ಯ ವೈಯಕ್ತಿಕವಾದ ವರ್ಚಸ್ಸು ಹೊಂದಿದ್ದಾರೆ. . ಗೋಪಾಲಯ್ಯ ಒಳ್ಳೆ ಪಾರ್ಕ್ ಮಾಡಿಸಿದ್ದಾರೆ. ಲಾಫಿಂಗ್ ಕ್ಲಬ್ ಎಲ್ಲಾ ಮಾಡಿಸಿದ್ದಾರೆ . ಬೆಳ್ಳ ಬೆಳಗ್ಗೆ ಪಾರ್ಕ್‌ಗೆ ಬಂದ್ರೆ ಎರಡು ಮೂರು ಸಾವಿರ ಜನ ಒಟ್ಟಿಗೆ ಸಿಕ್ತಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಸಿಂಗಲ್ ಸೈಡೆಡ್ ರಿಸಲ್ಟ್ ಬರುತ್ತೆ. ಕಾಂಗ್ರೆಸ್ ಮತ್ತು ಜೆಡಿಎಸ್ ಇಲ್ಲಿ ಲೆಕ್ಕಕ್ಕಿಲ್ಲ ಎಂದು ಹೇಳಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!