ರಾಜಕೀಯ

ಎಚ್.ವಿಶ್ವನಾಥ್ ಬೆನ್ನಿಗೆ ನಿಂತ, ಕುರುಬ,ದಲಿತ ಸಮುದಾಯ: ಕಾಂಗ್ರೆಸ್ ಗೆ ಆತಂಕ!

Shilpa D

ಮೈಸೂರು: ಹುಣಸೂರು ವಿಧಾನಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಚ್. ವಿಶ್ವನಾಥ್ ಅವರಿಗೆ ಕುರುಬ ಮತ್ತು ದಲಿತ ಸಂಘಟನೆಗಳು ಬೆಂಬಲ ಘೋಷಿಸಿವೆ.

ದಲಿತ ಮುಖಂಡರೆಲ್ಲ ಒಗ್ಗಟ್ಟಾಗಿ ವಿಶ್ವನಾಥ್ ಅವರಿಗೆ  ಬೆಂಬಲ ಸೂಚಿಸಿವೆ, ತಮ್ಮ ಸಮುದಾಯದ ಬಗ್ಗೆ ಯಾವುದೇ ರೀತಿಯ ವದಂತಿ ಹಬ್ಬಿಸದೇ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ದಲಿತ ಮುಖಂಡ ನಿಂಗರಾಜ್ ಮಾಲಡಿ ಮಾತನಾಡಿ, ಸಮುದಾಯದವರೆಲ್ಲಾ ವಿಶ್ವನಾಥ್ ಅವರನ್ನು ಮರು ಆಯ್ಕೆ ಮಾಡಬೇಕೆಂದು ಹೇಳಿದ್ದಾರೆ.

ಹುಣಸೂರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ದಲಿತರ ಮತಗಳಿವೆ, ಒಕ್ಕಲಿಗರ ನಂತರ ಅತಿ ಹೆಚ್ಚು ಸಂಖ್ಯೆಯಿರುವುದು ದಲಿತ ಸಮುದಾಯದ ಮತಗಳು, ನವೆಂಬರ್ 25 ರಂದು ದಲಿತ ಸಮುದಾಯಗಳು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ವಿಶ್ವನಾಥ್ ಅವರಿಗೆ ತಮ್ಮ ಬೆಂಬಲ ನೀಡುವುದಾಗಿ ನಿರ್ಣಯ ಕೈಗೊಂಡರು.

ಇದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬಹುದೊಡ್ಡ ಹೊಡೆತ ನೀಡಿದೆ.,ಆದರೆ ವಿಶ್ವಾಸ ಕಳೆದುಕೊಳ್ಳದ ಕಾಂಗ್ರೆಸ್ ಸಿದ್ದರಾಮಯ್ಯ ಮತ್ತು ಯತೀಂದ್ರ ಅವರನ್ನು ಪ್ರಚಾರಕ್ಕಿಳಿಸುವ ಮೂಲಕ ಕುರುಬ ಮತದಾರರ ಓಲೈಕೆಗೆ ಮುಂದಾಗಿದ್ದಾರೆ, ನಮ್ಮ ತಂದೆ ಒಬ್ಬಂಟಿಯಲ್ಲ, ಜನ ಮತ್ತು ಪಕ್ಷ ನಮ್ಮ  ತಂದೆ ಜೊತೆಗಿದೆ ಎಂದು ಹೇಳಿದ್ದಾರೆ.

SCROLL FOR NEXT