ರಾಜಕೀಯ

ಬಿಜೆಪಿಗೆ ವೋಟ್ ಕೊಟ್ಟು, ನಮಗೆ ಇನ್ನೊಮ್ಮೆ ಶಿಕ್ಷೆ ಕೊಡಬೇಡ್ರೀ…: ಸಿದ್ದರಾಮಯ್ಯ

Srinivasamurthy VN

ರಾಯಚೂರು: ಹಿಂದಿನ ಬಾಗಿಲಿನಿಂದ ಯಡಿಯೂರಪ್ಪ ಅವರು ಬಂದು ಅಧಿಕಾರ ಹಿಡಿದು ಕುಳಿತಿದ್ದಾರೆ. ಇದು ಮಾನಗೆಟ್ಟ ಸರ್ಕಾರ ಇಂತ ಸರ್ಕಾರ ಇರಬೇಕೇನ್ರೀ..? ಬಿಜೆಪಿಗೆ ವೋಟು ಕೊಟ್ಟು ನಮಗೆ ಶಿಕ್ಷೇ ಕೊಟ್ಟೀರಾ, ಇನ್ನೊಮ್ಮೆ ನಮಗೆ ಶಿಕ್ಷೆ ಕೊಡಬೇಡ್ರೀ.. ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಮನವಿ ಮಾಡಿದ್ದಾರೆ.

ಲಿಂಗಸುಗೂರು ತಾಲೂಕಿನ ಮುದುಗಲ್ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರೇ ಕರ್ನಾಟಕದ ಜನರನ್ನ ನಿರ್ಲಕ್ಷ್ಯ ಮಾಡಿದ ನಿಮಗೆ ಜನರ ಶಾಪ ತಟ್ಟದೇ ಇರಲ್ಲ.ಯಡಿಯೂರಪ್ಪ ಮುಖ್ಯಮಂತ್ರಿ ಆಗಬೇಕಿತ್ತು ಅಧಿಕಾರ ಹಿಡಿದು ಕುಳಿತಿದ್ದಾರೆ. ಆದರೆ ಬಿಜೆಪಿ ಹೈ ಕಮಾಂಡ್ ಯಡಿಯೂರಪ್ಪ ಅವರ ರೆಕ್ಕೆ ಪುಕ್ಕ ಕಟ್ ಮಾಡಿದ್ದಾರೆ. ಕೇಂದ್ರ ಸರ್ಕಾರವೂ ಆರ್ಥಿಕವಾಗಿ ದಿವಾಳಿಯಾಗಿದೆ. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವೂ ದಿವಾಳಿಯಾಗಿದೆ. ಯಡಿಯೂರಪ್ಪ ಒಂದು ಬಾರಿ 3 ದಿನ ಇನ್ನೊಂದು ಬಾರಿ 9 ದಿನ ಮುಖ್ಯಮಂತ್ರಿಯಾಗಿದ್ದರು.ಯಾವ ಪುರುಷಾರ್ಥಕ್ಕೆ ಅವರು ಮುಖ್ಯಮಂತ್ರಿ ಆಗಬೇಕ್ರೀ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ವಾಹದಿಂದ ಹಾನಿಗೊಳಗಾದ ಗ್ರಾಮ, ಪ್ರದೇಶಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದ್ದೇನೆ. ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕಾಣದಂತ ನೆರೆ ಆಗಿದೆ. ದಾಖಲೆ ಪ್ರಕಾರ 1914ರಲ್ಲಿ ದೊಡ್ಡ ಪ್ರವಾಹ ಬಂದಿತ್ತು. ಈ ವರ್ಷ ಎದುರಾಗಿರುವ ಪ್ರವಾಹದಿಂದ 8 ಲಕ್ಷ ಜನ ಬೀದಿ ಪಾಲಾಗಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿದೆ. 80 ಜನ ಸಸಾವನ್ನಪ್ಪಿ,ಹತ್ತಾರು ಜನ ನಾಪತ್ತೆಯಾಗಿ, ಲಕ್ಷಾಂತರ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

SCROLL FOR NEXT