ಸಂಗ್ರಹ ಚಿತ್ರ 
ರಾಜಕೀಯ

ನಾನು ಕುರುಬನಲ್ಲ, ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ನನಗಿಲ್ಲ: ಕೆಎಸ್ ಈಶ್ಪರಪ್ಪ

ನಾನು ಕುರುಬ ಸಮುದಾಯದವನಲ್ಲ, ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ನನಗಿಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆ: ನಾನು ಕುರುಬ ಸಮುದಾಯದವನಲ್ಲ, ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ನನಗಿಲ್ಲ ಎಂದು ಸಚಿವ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ದಾವಣೆಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಮಾತನಾಡಿದ ಈಶ್ವರಪ್ಪ ಅವರು, 'ಜಾತಿಗಳು ಒಂದಾಗಬೇಕು ಎಂಬ ಚಿಂತನೆ ತಪ್ಪಲ್ಲ. ಆದರೆ ಒಂದು ಜಾತಿಯನ್ನು ಇನ್ನೊಂದು ಜಾತಿಯ ವಿರುದ್ಧ ಎತ್ತಿಕಟ್ಟುವವರು ಮನುಷ್ಯರೇ ಅಲ್ಲ. ಹಿಂದಿನ ಸರ್ಕಾರವು ಲಿಂಗಾಯತ ಮತ್ತು ವೀರಶೈವ ಎಂದು ಒಡೆಯಲು ನೋಡಿತು. ಈಗ ಅವರೆಲ್ಲ ನೆಗೆದುಬಿದ್ದು ಹೋದರು. ಜಾತಿ ಎತ್ತಿ ಕಟ್ಟಿದರೆ ವೋಟು ಬೀಳುತ್ತದೆ ಎಂಬ ಭ್ರಮೆ ಅವರಿಗಿತ್ತು. ಈಗ ತಪ್ಪು ಮಾಡಿರುವುದಾಗಿ ಹೇಳುತ್ತಿದ್ದಾರೆ. ಧರ್ಮ ಒಡೆಯುವವರನ್ನು ದೂರ ಇಡುವ ಕೆಲಸವಾಗಬೇಕು ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

ಇದೇ ವೇಳೆ ನಾನು ವೀರಶೈವನೂ ಅಲ್ಲ, ಲಿಂಗಾಯತನೂ ಅಲ್ಲ. ಕುರುಬ ಅಲ್ಲವೇ ಅಲ್ಲ ಎಂದು ಹೇಳಿದ ಈಶ್ವರಪ್ಪ, 'ಹಿಂದೆ ಸ್ವಾಮೀಜಿಗಳ ಪಾದ ಮುಟ್ಟಿ ಭಕ್ತಿಯಿಂದ ನಮಸ್ಕರಿಸುತ್ತಿದ್ದರು. ಈಗ ಯಾವ ಸ್ವಾಮೀಜಿ ಎಂದು ನೋಡುತ್ತಾರೆ. ಅವರ ಜಾತಿಯವರಾದರೆ ಕಾಲು ಮುಟ್ಟುವುದು, ಇಲ್ಲವೆಂದರೆ ಕಾಲು ಮುರಿಯುವುದು ಆಗಿದೆ ಎಂದು ಹೇಳಿದರು. 

ಗುರುಗಳ ಪಾದತೊಳೆದು ನೀರು ಕುಡಿದರೆ ಆರೋಗ್ಯಕ್ಕೆ ಹಾನಿ ಎನ್ನುತ್ತಾರೆ. ರಾತ್ರಿ ಹೆಂಡ ಕುಡಿದರೆ ಆರೋಗ್ಯಕ್ಕೆ ಹಾನಿಯಾಗುವುದಿಲ್ವ. ಅದರ ಬಗ್ಗೆ ಮಾತನಾಡುವುದಿಲ್ಲ. ನಾವು ತೀರ್ಥ ಸೇವಿಸಿದರೆ ಮಾತನಾಡುತ್ತಾರೆ. ಹಿಂದೊಮ್ಮೆ ಜೇವರ್ಗಿಯಲ್ಲಿ ಅಡ್ಡಪಲ್ಲಕ್ಕಿ ಮಾಡಬೇಕಾ ಬೇಡ್ವ ಎಂದು ಕೆಲವರು ಚರ್ಚೆ ಮಾಡಿದರು. ಸರ್ಕಾರ ಅನುಮತಿ ಕೊಡಲಿಲ್ಲ. ಇನ್ನೊಂದು ಗಂಟೆಯಲ್ಲಿ ಅನುಮತಿ ನೀಡಿಲ್ಲ ಅಂದರೆ ನೀನು ಮುಖ್ಯಮಂತ್ರಿಯಾಗಿ ಉಳಿಯಲ್ಲ ಎಂದು ಶಾಪ ಕೊಡುವುದಾಗಿ ಸ್ವಾಮೀಜಿ ಹೇಳಿದ ಕೂಡಲೇ ಅನುಮತಿ ಕೊಟ್ಟರು. ಇದು ಸ್ವಾಮೀಜಿಯ ಶಕ್ತಿ ಎಂದು ಈಶ್ವರಪ್ಪ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!