ರಾಜಕೀಯ

ವಿರೋಧ ಪಕ್ಷ ನಾಯಕನ ಆಯ್ಕೆ ಕಸರತ್ತು: ಸಿದ್ದರಾಮಯ್ಯ ಬಣದಲ್ಲಿ ಕುಗ್ಗಿದ ಆತ್ಮವಿಶ್ವಾಸ!

Shilpa D

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನ ಆರಂಭವಾಗುವುದಕ್ಕೆ ಇನ್ನೂ ಒಂದು ದಿನ ಮಾತ್ರ ಬಾಕಿಯಿದೆ, ಹೀಗಿರುವಾಗ ಇನ್ನೂ ಕಾಂಗ್ರೆಸ್  ನಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಲ್ಲ.

ಸಿಎಲ್ ಪಿ ನಾಯಕನಾಗಿರುವ ಸಿದ್ದರಾಮಯ್ಯ ಅವರಿಗೆ ತಾವೇ ವಿರೋಧ ಪಕ್ಷದ ನಾಯಕನಾಗುತ್ತೇನೆ ಎಂದು ಕಳೆದ ಒಂದು ತಿಂಗಳ ಹಿಂದೆ ವಿಶ್ವಾಸವಿತ್ತು, ಆದರೆ ಇಂದು ಪರಿಸ್ಥಿತಿ ತೀರಾ ಭಿನ್ನವಾಗಿದೆ, ಪಕ್ಷದೊಳಗೆ ಸಿದ್ದರಾಮಯ್ಯ ವಿರೋಧಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಕೈ ತಪ್ಪುವ ಸಿದ್ದು ಬೆಂಬಲಿಗರನ್ನು ಕಾಡುತ್ತಿದೆ,

ಈಗಾಗಲೇ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷ ಸ್ಥಾನ ನೀಡಬಾರದು, ಒಬ್ಬರಿಗೆ ಒಂದೇ ಹುದ್ದೆ ಮಾತ್ರ ನೀಡಬೇಕು ಎಂದು ಹಲವರು ಎಐಸಿಸಿಗೆ ಮನವಿ ಮಾಡಿದ್ದಾರೆ, ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರಿಯಲಿ, ಬೇರೊಬ್ಬರನ್ನು ವಿರೋಧ ಪಕ್ಷದ ನಾಯಕನ ಹುದ್ದೆಗೆ ನೇಮಕಮಾಡಬೇಕೆಂದು ಮನವಿ ಸಲ್ಲಿಸಿದ್ದಾರೆ, ಇದು ಕಾಂಗ್ರೆಸ್ ಹೈಕಮಾಂಡ್  ಗೊಂದಲಕ್ಕೆ ಕಾರಣವಾಗಿದೆ,

ಅನರ್ಹಗೊಂಡಿರುವ ಶಾಸಕರಲ್ಲಿ ಹಲವು ಮಂದಿ ಸಿದ್ದರಾಮಯ್ಯ ನಿಷ್ಠಾವಂತರಿದ್ದಾರೆ ಎಂದು ಜೆಡಿಎಸ್ ನ ಎಚ್.ಡಿ ದೇವೇಗೌಡ ಮತ್ತಪು ಕುಮಾರಸ್ವಾಮಿ ಬಹಿರಂಗ ಆರೋಪ ಮಾಡಿದ್ದು ಬಹುಶಃ ಸಿದ್ದರಾಮಯ್ಯ ಅವರಿಗೆ ಮುಳುವಾಗಬಹುದು ಎಂದು ವಿಶ್ಲೇಷಶಲಾಗುತ್ತಿದೆ. 

ಎಐಸಿಸಿ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿಯಿಂದ ಸೋನಿಯಾ ಗಾಂಧಿಗೆ ಹಸ್ತಾಂತರಿಸಿದ ಮೇಲೆ ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರು ಎಂಬ ಕಿತ್ತಾಟ ಆರಂಭವಾಗಿದೆ.ದೇಶದ್ಯಾಂತ ಕಾಂಗ್ರೆಸ್ ಸಾಮರ್ಥ್ಯ ಕುಗ್ಗುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯರ ಬಣವು ಕರ್ನಾಟಕದಲ್ಲಿ ಪಕ್ಷವನ್ನು ಒಡೆಯುವ ಬೆದರಿಕೆ ಹಾಕುತ್ತಿದೆ ಇದರಿಂದಾಗಿ ಪಕ್ಷಕ್ಕೆ ಮತ್ತಷ್ಟು ತೊಂದರೆಗಳನ್ನು ತರುತ್ತಿದೆ.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲರ ಕಣ್ಣು ಕೆಪಿಸಿಸಿ ಫ್ಯಾಕ್ಸ್ ಮೆಷಿನ್ ಮೇಲೆ ನೆಟ್ಟಿದೆ.

SCROLL FOR NEXT