ಎಚ್. ವಿಶ್ವನಾಥ್, ದಿನೇಶ್ ಗುಂಡೂರಾವ್ 
ರಾಜಕೀಯ

ಚಾಮುಂಡಿಯ ಪುಣ್ಯಕ್ಷೇತ್ರವನ್ನು ಅಪವಿತ್ರಗೊಳಿಸಬೇಡಿ, ನಿಮ್ಮ ಯೋಗ್ಯತೆ ಸಾಬೀತುಪಡಿಸಿ: ದಿನೇಶ್ ಗುಂಡೂರಾವ್

ಜೆಡಿಎಸ್ ಅನರ್ಹ ಶಾಸಕ ಎಚ್ . ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.

ಬೆಂಗಳೂರು: ಜೆಡಿಎಸ್ ಅನರ್ಹ ಶಾಸಕ ಎಚ್. ವಿಶ್ವನಾಥ್ ಹಾಗೂ  ಶಾಸಕ ಸಾರಾ ಮಹೇಶ್ ನಡುವಿನ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿರುವಂತೆ  ನಾಡ  ದೇವತೆ ತಾಯಿ ಚಾಮುಂಡೇಶ್ವರಿ ದೇಗುಲದ ಬಳಿ ಆಣೆ ಪ್ರಮಾಣ ಮಾಡುವಂತೆ ಪರಸ್ಪರ ಸವಾಲ್ ಹಾಕಿದ್ದಾರೆ.

ಈ ಸಂಬಂಧ ಟ್ವಿಟರ್ ನಲ್ಲಿ  ಹೆಚ್ ವಿಶ್ವನಾಥ್ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ನೀವೆಷ್ಟು ಪ್ರಾಮಾಣಿಕರು, ಯೋಗ್ಯರು ಎಂಬುದು ರಾಜ್ಯಕ್ಕೆ ತಿಳಿದಿದೆ.ಚಾಮುಂಡಿಯ ಪುಣ್ಯಕ್ಷೇತ್ರವನ್ನು ನಿಮ್ಮ ಆಣೆ ಪ್ರಮಾಣದ ರಾಜಕೀಯ ದೊಂಬರಾಟದ ಅಖಾಡ ಮಾಡಿಕೊಂಡು ಅಪವಿತ್ರ ಗೊಳಿಸಬೇಡಿ,ಮುಂದೆ ಚುನಾವಣೆಗಳು ಬರುತ್ತಿವೆ, ಜನತಾ ನ್ಯಾಯಾಲಯದ ಮುಂದೆ ನಿಮ್ಮ ಯೋಗ್ಯತೆ ಸಾಬೀತು ಪಡಿಸಿ ಎಂದಿದ್ದಾರೆ.

ಹೆಚ್.ವಿಶ್ವನಾಥ್  ತಮ್ಮ ಸ್ವಾರ್ಥ, ಅಧಿಕಾರದ ಆಸೆಗೆ ಕಮಲ ಹಿಡಿಯಲು ಹೋಗಿ ನಿಂತಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಉತ್ತಮ ವ್ಯಕ್ತಿತ್ವ ಕಾಪಾಡಿಕೊಳ್ಳಲು ನೀವು ಆ ಕೆಸರಿಂದ ದೂರ ಉಳಿಯುವುದೇ ಲೇಸು.ಕೆಸರೆರಚಾಟ ಮಾಡುವವರನ್ನು ನಿರ್ಲಕ್ಷಿಸಿರಿ ಮುನ್ನಡೆಯಿರಿ, ಮುಂದಿನದು ಜನತೆಗೆ ತೀರ್ಮಾನಿಸಲು ಬಿಡಿ ಎಂದು ಸಾರಾ ಮಹೇಶ್ ಅವರಿಗೆ  ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್, ನದಿ ಪಾತ್ರದಲ್ಲಿ ಕಟ್ಟೆಚ್ಚರ

ನಿನ್ನ ತಲೆ ಕಡಿತೀವಿ: ಈದ್ ಮೆರವಣಿಗೆ ವೇಳೆ ಪುನೀತ್ ಕೆರೆಹಳ್ಳಿ ವಿರುದ್ಧ ಘೋಷಣೆ, ಹಿಂದೂ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ!

Chandra Grahan 2026: ವರ್ಷದ ಕೊನೆಯ ಸುದೀರ್ಘ ಚಂದ್ರಗ್ರಹಣ; ಭಾರತದಲ್ಲಿ ಸೂತಕ ಕಾಲ ಇಲ್ಲ, ಯಾಕೆ ಗೊತ್ತ?

2ನೇ ಟೆಸ್ಟ್ ಗೆಲುವಿನ ಹಾದಿಯಲ್ಲಿ ಟೀಂ ಇಂಡಿಯಾ; ಶ್ರೀಲಂಕಾ ವಿರುದ್ಧ ಭಾರತ ಗೆದ್ದರೆ WTC ಅಂಕಪಟ್ಟಿಯಲ್ಲಿ ಮಹತ್ತರ ಬದಲಾವಣೆ!