ಸಂಗ್ರಹ ಚಿತ್ರ 
ರಾಜಕೀಯ

ಪಕ್ಷದ ವರಿಷ್ಠರ ನಡೆಯಿಂದ ನನಗೂ ಸಾಕಷ್ಟು ನೋವಾಗಿದೆ: ಬಸವರಾಜ ಹೊರಟ್ಟಿ ಹೇಳಿಕೆ

ಪಕ್ಷದ ನಾಯಕರ ನಡೆಯಿಂದ ತಮಗೂ ಸಾಕಷ್ಟು ನೋವಾಗಿದೆ, ಆದರೆ, ನಾನು ಬಹಿರಂಗವಾಗಿ ಹೇಳಿಕೊಂಡಿಲ್ಲ. ತಮ್ಮ ಬಳಿ ಅನೇಕ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಅತೃಪ್ತಿ ಈಗ ಸ್ಫೋಟಗೊಳ್ಳುತ್ತಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ,ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ಪೋಟಕ ಹೇಳಿಕೆ ನೀಡಿದ್ದಾರೆ

ಧಾರವಾಡ: ಪಕ್ಷದ ನಾಯಕರ ನಡೆಯಿಂದ ತಮಗೂ ಸಾಕಷ್ಟು ನೋವಾಗಿದೆ, ಆದರೆ, ನಾನು ಬಹಿರಂಗವಾಗಿ ಹೇಳಿಕೊಂಡಿಲ್ಲ. ತಮ್ಮ ಬಳಿ ಅನೇಕ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಅತೃಪ್ತಿ ಈಗ ಸ್ಫೋಟಗೊಳ್ಳುತ್ತಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ,ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ಪೋಟಕ ಹೇಳಿಕೆ ನೀಡಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಜಿ ಟಿ  ದೇವೇಗೌಡರು ಅವರ ಹೇಳಿಕೆಯಂತೆ ಪಕ್ಷದಲ್ಲಿ ಉಸಿರುಗಟ್ಟಿಸುವ ವಾತಾವರಣ ಇದೆ. ಹೀಗಾಗಿ ಅವರು ಹೆಚ್ಚು ದಿನ ಜೆಡಿಎಸ್ ಪಕ್ಷದಲ್ಲು ಉಳಿಯುವುದಿಲ್ಲ.ಆದರೆ, ಯಾವ ಪಕ್ಷಕ್ಕೆ ಹೋಗುತ್ತಾರೆ ಎಂಬುದು ತಮಗೆ ತಿಳಿದಿಲ್ಲ.

'ಅಂಗೈ ಹುಣ್ಣಿಗೆ ಕನ್ನಡಿ ಬೇಕೆ' ಎಂಬ ಗಾದೆಯಂತೆ ಜಿಟಿಡಿ ಅವರು ಇಲ್ಲಿ ಇರುವುದಿಲ್ಲ ಎನ್ನುವುದು ಅವರ ಮಾತಿನಲ್ಲೇ ಸ್ಪಷ್ಟವಾಗುತ್ತದೆ. ಅವರಿಗೆ ಪಕ್ಷದ ಮೇಲೆ ಹಾಗೂ ನಾಯಕರ ಬಗ್ಗೆ ಮೊದಲೇ  ಅಸಮಾಧಾನವಿತ್ತು. ಉಸಿರುಗಟ್ಟುವ ವಾತಾವಾರಣ ಇದೆ ಎಂದಿದ್ದರು ಅದು ತಮಗೂ ಸರಿ ಅನಿಸಿತ್ತು. ಹೀಗಾಗಿ ಅವರು ಈ ಪಕ್ಷದಲ್ಲಿ ಇರುವುದಿಲ್ಲ ಎಂದು ಬಸವರಾಜ್ ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.

ಅಸಮಾಧಾನಗೊಂಡ ಶಾಸಕರನ್ನು ಕರೆದು ಪಕ್ಷದ ವರಿಷ್ಠರು ಮುಕ್ತವಾಗಿ ಚರ್ಚಿಸುವುದು ಅವರ ಧರ್ಮ. ಹೀಗೆ ದಿನಕ್ಕೊಬ್ಬರಂತೆ ಅಸಮಾಧಾನ ವ್ಯಕ್ತಪಡಿಸುತ್ತಾ ಸಾಗಿದರೆ ಪಕ್ಷಕ್ಕೆ ಮತ್ತಷ್ಟು ಹಾನಿಯಾಗಲಿದೆ. ಸದ್ಯದ ಬೆಳವಣಿಗೆ ನೋಡಿದರೆ ಅಪರೇಷನ್ ಕಮಲ ನಡೆಯುತ್ತದೆ ಎಂದೆನಿಸುತ್ತದೆ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ನಮ್ಮ ಬಗ್ಗೆ ವರಿಷ್ಠರು ಹಾಗೂ ಮುಖ್ಯಮಂತ್ರಿ ಅವರು ಕಾಳಜಿ ವಹಿಸಿಲ್ಲ ಎಂದು ಬಹಳ ಜನ ಶಾಸಕರು ತಮ್ಮ ಬಳಿ ನೋವು ತೋಡಿಕೊಂಡಿದ್ದಾರೆ ಎನ್ನುವ ಮೂಲಕ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ಎಂಬ ಸಂದೇಶ ರವಾನಿಸಿದ್ದಾರೆ. 

ಬಿಜೆಪಿ ಪಕ್ಷದಲ್ಲಿ ಅನುಭವಿಗಳ ಕೊರತೆಯಿದ್ದು, ಅನನುಭವಿಗಳೇ ಹೆಚ್ಚಾಗಿದ್ದಾರೆ. ಅನುಭವ ಇದ್ದವರು ಎಲ್ಲರೂ ಹೊಟ್ಟೆ ತುಂಬಿದವರು ಆಗಿದ್ದಾರೆ. ಕಾನೂನು ಪ್ರಕಾರವಾಗಿ ಸಚಿವರು ಅಭಿವೃದ್ಧಿ ಕೆಲಸ ಮಾಡಿದರೆ ಸಾಕು. ಆದರೆ, ಅವರಿಗೆ  ಇಚ್ಛಾಶಕ್ತಿ ಕೊರತೆ ಇದೆ. ಹೀಗಾಗಿ ಸರ್ಕಾರದಲ್ಲಿ ಅಸಮಾಧಾನಗಳು ಹೆಚ್ಚಾಗಿವೆ ಎಂದು ವಿಶ್ಲೇಷಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಬಿಟ್ಟರೆ ಬೇರೆ ಯಾವ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ನೆರೆ, ಅತಿವೃಷ್ಠಿ ಪರಿಸ್ಥಿತಿಯಲ್ಲಿ ಸಚಿವರೆಲ್ಲರೂ ಹಗಲಿರುಳೆನ್ನದೆ ಕೆಲಸ ಮಾಡಬೇಕಿತ್ತು. ಆದರೆ, ಕೇವಲ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿ ಮರಳಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎನ್ನುವ ಭಾವನೆ ಜನರಲ್ಲಿದೆ ಮೂಡಿದೆ. ವಿಧಾನಸಭೆಯಲ್ಲಿ ಒಬ್ಬರು ಸಚಿವರಿಲ್ಲ.ಸಚಿವರು ಅಲ್ಲಿಯೂ ಇಲ್ಲ ಜನರ ಬಳಿಯೂ ಇಲ್ಲ ಎಂದಾದರೇ ಎಲ್ಲಿಗೆ ಹೋಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಮಾಜಿ ಸಚಿವ ಡಿಕೆ ಶಿವಕುಮಾರ್ ಇಡಿ ವಿಚಾರಣೆ ಕುರಿತು ಹೆಚ್ಚಿಗೆ ಮಾತನಾಡುವುದಿಲ್ಲ ಅದು ಕಾನೂನು ಕೆಲಸ. ಆದರೆ, ಅವರು ಎಂದಿಗೂ ವಿಚಾರಣೆಗೆ ಗೈರುಹಾಜರಾಗಿಲ್ಲ. ಕರೆದಾಗೆಲ್ಲ ವಿಚಾರಣೆಗೆ ಸ್ಪಂದಿಸಿದ್ದಾರೆ. ಹೀಗಾಗಿ ಅವರನ್ನು ಬಂಧಿಸುವ ಅಗತ್ಯವಿರಲಿಲ್ಲ ಎಂದು ಡಿಕೆ ಶಿವಕುಮಾರ್ ಪರ ಬಂಧನವನ್ನು ಬಸವರಾಜ್ ಹೊರಟ್ಟಿ ವಿರೋಧಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT