ರಾಜಕೀಯ

ವಿಧಾನಸಭೆಗೆ ಮಧ್ಯಂತರ ಚುನಾವಣೆ ಶತಸಿದ್ಧ, ಜೆಡಿಎಸ್ ಏಕಾಂಗಿ ಸ್ಪರ್ಧೆ: ಎಚ್ ಡಿ ದೇವೇಗೌಡ

Lingaraj Badiger

ಬೆಂಗಳೂರು: ಉಪ ಚುನಾವಣೆಗೆ ಕಾಂಗ್ರೆಸ್‍ ಜೊತೆ ಮೈತ್ರಿಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು, ವಿಧಾನಸಭೆ ಮಧ್ಯಂತರ ಚುನಾವಣೆಗೆ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಸೋಮವಾರ ಹೇಳಿದ್ದಾರೆ.

2020ರ ಜನವರಿ ಅಥವಾ ಫೆಬ್ರವರಿ ತಿಂಗಳಿನಲ್ಲಿ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಯಿದೆ ಎಂದು ಭವಿಷ್ಯ ನುಡಿದಿರುವ ಮಾಜಿ ಪ್ರಧಾನಿ, ಮಧ್ಯಂತರ ಚುನಾವಣೆಗೆ ಪಕ್ಷ ಏಕಾಂಗಿಯಾಗಿ ಕಣಕ್ಕಿಳಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಂದಿನ ರಾಜಕೀಯ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆ ಸಾಧ್ಯತೆ ಹೆಚ್ಚಿದೆ. ಮುಖಂಡರು ಮೈಮರೆಯದೇ ಪಕ್ಷ ಸಂಘಟನೆ ಮಾಡಿ. ಮಧ್ಯಂತರ ಚುನಾವಣೆ ಬಂದರೆ ನಾವು ಏಕಾಂಗಿಯಾಗಿ ಸ್ಪರ್ಧೆ ಮಾಡೋಣ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದರೂ ಯಾರು ಬೆಂಬಲ ಕೊಡಲಿಲ್ಲ.  ಹೀಗಾಗಿ ನಾವು ಮತ್ತೆ ಆ ತಪ್ಪು ಮಾಡಲ್ಲ. ಏಕಾಂಗಿಯಾಗಿ ಎಲ್ಲಾ ಚುನಾವಣೆ ಎದುರಿಸೋಣ. ಕುಮಾರಸ್ವಾಮಿ ಸಿಎಂ ಆದಾಗ ಮಾಡಿದ ಕೆಲಸವನ್ನು ಮನೆ ಮನೆಗೆ ತಲುಪಿಸಿ. ಮಧ್ಯಂತರ ಚುನಾವಣೆ ನಡೆದರೆ ಜೆಡಿಎಸ್​ಗೆ ಗೆಲುವು ನಿಶ್ಚಿತ ಎಂದರು.
 

SCROLL FOR NEXT