ದಿನೇಶ್ ಗುಂಡೂರಾವ್ 
ರಾಜಕೀಯ

ಕಾಂಗ್ರೆಸ್ ನಲ್ಲಿ ರಾಜರಂತಿದ್ದ ಅನರ್ಹರು ಬಿಜೆಪಿ ಮುಂದೆ ಭಿಕ್ಷುಕರಾಗಿದ್ದಾರೆ: ದಿನೇಶ್ ಗುಂಡೂರಾವ್

ಕಾಂಗ್ರೆಸ್ ಪಕ್ಷದಲ್ಲಿ ರಾಜ ಮರ್ಯಾದೆ ಹೊಂದಿದ್ದ ಅನರ್ಹ ಶಾಸಕರು ಇದೀಗ ಬಿಜೆಪಿಯ ಮುಂದೆ ಭಿಕ್ಷುಕರಾಗಿ ಪರಿವರ್ತನೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ. 

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಜ ಮರ್ಯಾದೆ ಹೊಂದಿದ್ದ ಅನರ್ಹ ಶಾಸಕರು ಇದೀಗ ಬಿಜೆಪಿಯ ಮುಂದೆ ಭಿಕ್ಷುಕರಾಗಿ ಪರಿವರ್ತನೆಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್ ಈ ಹಿಂದೆಯೇ ಅನರ್ಹರಿಗೆ ಎರಡುಮೂರು ಬಾರಿ ಎಚ್ಚರಿಕೆ‌ ನೀಡಿದ್ದೆ. ಬಿಜೆಪಿಯನ್ನು ನಂಬಬೇಡಿ ಎಂದಿದ್ದೆ. ಕಾಂಗ್ರೆಸ್ ಪಕ್ಷದಲ್ಲಿ ಅವರು ರಾಜರಂತಿದ್ದರು. ಅವರಿಗೆ ಪಕ್ಷದಲ್ಲಿ ಯಾವುದೇ ಕೊರತೆ ಇರಲಿಲ್ಲ.ಆದರೆ ಪಕ್ಷಕ್ಕೆ ದ್ರೋಹವೆಸಗಿ ಬಿಜೆಪಿಗೆ ಬೆಂಬಲ ಸೂಚಿಸಿದರು. ಬಿಜೆಪಿಯನ್ನು ನಂಬಿಹೋದ ಅನರ್ಹರು ಈಗ ಬಿಜೆಪಿ ಮುಂದೆ ಭಿಕ್ಷೆ ಬೇಡುವ ಹಂತ ತಲುಪಿದ್ದಾರೆ ಎಂದರು

ಸುಪ್ರೀಂ ನ್ಯಾಯಾಧೀಶ ಶಾಂತನಗೌಡರ್ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆಸರಿದ ಕಾರಣ  ಅರ್ಜಿಯ ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಲಾಗಿದೆ.

"ರಮೇಶ್ ಕುಮಾರ್ ಸ್ಪೀಕರ್ ಆಗಿದ್ದಾಗ ಶಾಸಕರ ರಾಜೀನಾಮೆ ಬಗೆಗೆ ಕಾನೂನಾತ್ಮಕವಾಗಿಯೇ ಕ್ರಮ ತೆಗೆದುಕೊಂಡಿದ್ದಾರೆ.ಸಕರನ್ನು ಅನರ್ಹ ಮಾಡಿರುವುದು ಉತ್ತಮ ನಿರ್ಧಾರವಾಗಿದ್ದು ಅವರೆಲ್ಲಾ ಪಕ್ಷಾಂತರಿಗಳಾಗಿದ್ದಾರೆ ಎನ್ನುವುದು ರಾಜ್ಯದ ಜನತೆಗೂ ಗೊತ್ತಿದೆ.ಅಲ್ಲದೆ ಅವರನ್ನೆಂದಿಗೂ ಕಾಂಗ್ರೆಸ್ ಗೆ ವಾಪಾಸು ಕರೆಸಿಕೊಳ್ಳುವ ಪ್ರಶ್ನೆ ಇಲ್ಲ" ಎಂದು ಗುಂಡೂರಾವ್ ಹೇಳಿದ್ದಾರೆ.

ಗಾಂಧೀಜಿಯನ್ನು ಕೇವಲ ಸ್ವಚ್ಚತೆಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಆದರೆ ನಾವು ಅಷ್ಟಕ್ಕೇ ಸುಮ್ಮನಾಗುವುದಿಲ್ಲ. ಪಾದಯಾತ್ರೆ ಮೂಲಕ ಗಾಂಧೀ ತತ್ವಾದರ್ಶವನ್ನು ರಾಜ್ಯದ ಜನತೆಯ ಅರಿಇವಿಗೆ ತರಲಿದ್ದೇವೆ. ಬಿಜೆಪಿಯು ಗಾಂಧೀಜಿಯನ್ನು ಸ್ವಚ್ಚತೆಗಾಗಿ ಅಷ್ಟೇ ಸೀಮಿತ ಮಾಡಿದೆ. ರಾಷ್ಟ್ರೀಯತೆ ಎಮ್ದರೆ ರಾಜಕೀಯಕ್ಕಾಗಿ ಬಳಸುವ ಪದ ಎಂಬಂತಾಗಿದ್ದು ಇದನ್ನು ನಾವು ಜನತೆಯ ಅರಿವಿಗೆ ತರಲಿದ್ದೇವೆ ಎಂದರು. ಅಕ್ಟೋಬರ್ 2 ರಿಂದ ಜನವರಿ 31ರವರೆಗೆ ಗಾಂಧೀಜಿ ತತ್ವಾದರ್ಶಗಳ ಪ್ರಚಾರಕ್ಕಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದಾಗಿ ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ