ರಾಜಕೀಯ

ಜಿಲ್ಲಾ ಉಸ್ತುವಾರಿ ನೇಮಕ: ಬಳ್ಳಾರಿ ಮೇಲಿನ ಹಿಡಿತ ಕಳೆದುಕೊಂಡ್ರಾ ಶ್ರೀರಾಮುಲು! 

Shilpa D

ಬಳ್ಳಾರಿ: ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಬಳ್ಳಾರಿ ಉಸ್ತುವಾರಿಯನ್ನಾಗಿ ನೇಮಿಸಿರುವುದರಿಂದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು  ಅವರಿಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.

ಈ ಮೊದಲು ಶ್ರೀರಾಮುಲು ಅವರನ್ನು ಯಡಿಯೂರಪ್ಪ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗಿತ್ತು. ಆದರೆ ಅವರಿಗೆ ಡಿಸಿಎಂ ಹುದ್ದೆ ತಪ್ಪುವ ಮೂಲಕ ಶ್ರೀರಾಮುಲು ಅವರ ಕನಸು ನುಚ್ಚು ನೂರಾಗಿದೆ.

ಸೋಮವಾರ ಸಿಎಂ ಯಡಿಯೂರಪ್ಪ ಅಧಿಕೃತವಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಸೇಮಿಸಿದ್ದು,  ಬಳ್ಳಾರಿಗೆ ಲಕ್ಷ್ಮಣ ಸವದಿ ಅವರನ್ನು ನೇಮಿಸಲಾಗಿದೆ. ಶ್ರೀರಾಮುಲು ಅವರಿಗೆ ಯಾದಗಿರಿ ಉಸ್ತುವಾಹಿ ವಹಿಸಲಾಗಿದೆ,

ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಶ್ರೀರಾಮುಲು, ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ಜನಾರ್ದನ ರೆಡ್ಡಿ  ಅವರಿಲ್ಲದೇ ಶ್ರೀರಾಮುಲು ಕೈಯ್ಯಲ್ಲಿ ಬಳ್ಳಾರಿ ನಿಯಂತ್ರಣ ಸಾಧ್ಯವಿಲ್ಲ ಎಂಬುದು ಬಿಜೆಪಿ ಹೈಕಮಾಂಡ್ ಗೆ ಮನವರಿಕೆಯಾಗಿದೆ ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಿಲ್ಲ ಪಕ್ಷದ ಮೂಲಗಳು ತಿಳಿಸಿವೆ, 

ಇದಕ್ಕೆ ತಾಜಾ ಉದಾಹರಣೆ ಎಂದರೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಸಿಟಿಯಲ್ಲಿ ಪಕ್ಷಕ್ಕೆ ಅತಿ ಹೆಚ್ಚಿನ ಮತಗಳು ಬಂದಿವೆ, ಆದರೆ ಗ್ರಾಮೀಣ ಭಾಗದಲ್ಲಿ ಕಡಿಮೆಯಾಗಿದೆ. ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರ ಕಪಿಮುಷ್ಟಿಯಿಂದ  ಬಳ್ಳಾರಿಯನ್ನು ಬಿಡಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT