ರಾಜಕೀಯ

ಸಿದ್ದರಾಮಯ್ಯ ವಿರುದ್ಧ 'ವಡ್ಡ' ಪದಬಳಕೆ: ಈಶ್ವರಪ್ಪ ವಿರುದ್ಧ ಬೋವಿ ಜನಾಂಗ ಆಕ್ರೋಶ

Shilpa D

ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಅವರ ಬಗ್ಗೆ 'ದಡ್ಡ' ಪದ ಪ್ರಯೋಗ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ವಡ್ಡ' ಎಂದು ಕರೆದಿದ್ದ ಸಚಿವ ಈಶ್ವರಪ್ಪ ವಿರುದ್ಧ ಬೋವಿ  ಸಮುದಾಯ ಆಕ್ರೋಶ ವ್ಯಕ್ತ ಪಡಿಸಿದೆ.

ವಡ್ಡ ಸಮುದಾಯಕ್ಕೆ ಮಾಡಿರುವ ಅಪಮಾನಕ್ಕಾಗಿ ಈಶ್ವರಪ್ಪ ಅವರು ಬೇಷರತ್ ಕ್ಷಮಾಪಣೆ ಕೇಳಬೇಕು ಎಂದು ಮಾಜಿ ಸಂಸದ ಧ್ರುವ ನಾರಾಯಣ ಆಗ್ರಹಿಸಿದ್ದಾರೆ.

ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಗೊಳಿಸಬೇಕು ಇಲ್ಲದಿದ್ದಲ್ಲಿ ದಸರಾ ಉತ್ಸವವನ್ನು ಬಾಯ್ಕಾಟ್ ಮಾಡಿ ಈಶ್ವರಪ್ಪ ಅವರಿಗೆ ಘೇರಾವ್ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. 

ಶಿವಮೊಗ್ಗದ ವೀರಶೈವ ಕಲ್ಯಾಣ ಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಈಶ್ವರಪ್ಪ
ಉತ್ತರಿಸುವ ಭರದಲ್ಲಿ'ವಡ್ಡ' ಪದ ಪ್ರಯೋಗ ಮಾಡಿದ್ದರು.

ತಕ್ಷಣ ಸುಧಾರಿಸಿಕೊಂಡ ಅವರು, ವಡ್ಡರ ಬಗ್ಗೆ ನನಗೆ ಅಪಾರ ಗೌರವ ಇದೆ. ಅವರು ಶ್ರಮಿಕರು ಎಂದು ಸಮಜಾಯಿಷಿ ನೀಡಿದ್ದರು. 

SCROLL FOR NEXT