ರಾಜಕೀಯ

ಮೈಸೂರಲ್ಲಿ ಸರಿಯಿದ್ರು, ದಾವಣಗೆರೆಲಿ ಏನಾಯ್ತೋ ಗೊತ್ತಿಲ್ಲ: ಸಚಿವ ವಿ. ಸೋಮಣ್ಣ

Raghavendra Adiga

ಮೈಸೂರು:  ಮೊನ್ನೆಯೆಲ್ಲಾ ಅವರು ದಸರಾ ಉದ್ಘಾಟನಾ ಕಾರ್ಯಕ್ರಮದ ವೇಳೆ ಖುಷಿಯಾಗಿಯೆ ಇದ್ದರು.ಆದರೆ ದಾವಣಗೆರೆಗೆ ಹೋದಾಗ ಏನಾಗಿದೆಯೋ ನನಗೆ ತಿಳಿದಿಲ್ಲ.ಯಡಿಯೂರಪ್ಪ ಅವರಿಗೆ ಅನುಭವವಿದೆ. ಮುಖ್ಯಮಂತ್ರಿ ಸ್ಥಾನದಲ್ಲಿದ್ದಾಗ ಒತ್ತಡ ಇರುತ್ತದೆ ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.
  
ನಗರದಲ್ಲಿ ಸುದ್ದಿಗಾರರೊಂದಿಗೆ  ಜೊತೆ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಅವರದೇ ದೃಷ್ಟಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುವ ಕಲ್ಪನೆ ಹೊಂದಿದ್ದಾರೆ. ಅಘೋಚರವಾಗಿ ಅವರಿಗೆ ಏನಾದರೂ ಇರಿಸು ಮುರಿಸು ಆದರೆ ಕೆಲ ಕಾಲ ಸಿಟ್ಟಾಗಿ ನಂತರ ಸರಿ ಹೋಗುತ್ತಾರೆ. ಸರ್ಕಾರದ ಮಟ್ಟದಲ್ಲಿ ಸಣ್ಣಪುಟ್ಟ ನ್ಯೂನತೆ ಇದ್ದರೆ ಅದನ್ನು ಸರಿಪಡಿಸಿಕೊಂಡು ಅವರು ಸರ್ಕಾರ ನಡೆಸುತ್ತಾರೆ ಎಂದು ಅವರು ಹೇಳಿದರು. 
  
ಅನರ್ಹ ಶಾಸಕರ ಬಗ್ಗೆ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಅನರ್ಹ ಶಾಸಕರು ತ್ಯಾಗ ಮಾಡಿದ್ದಾರೆ. ಅವರ ಕೊಡುಗೆ ಅಪಾರವಾಗಿದ್ದು, ಅವರ ಬಗ್ಗೆ ಲಘುವಾಗಿ ಮಾತಾಡಬಾರದು.ಉಮೇಶ್ ಕತ್ತಿ ಭೇಟಿ ಮಾಡಿದರೆ ಮುಲಾಜಿಲ್ಲದೇ ಕೆಟ್ಟ ಭಾಷೆಯಲ್ಲಿ ಅವರಿಗೆ ಈ ಬಗ್ಗೆ ಕೇಳುತ್ತೇನೆ. ಕತ್ತಿ ನೀಡಿರುವ ಹೇಳಿಕೆಗಳು ಎಂದಾದರೂ ಸರಿ ಇದೆಯಾ(?) ಎಂದು ಅವರು ಪ್ರಶ್ನೆ ಮಾಡಿದರು.
  
ಅಲ್ಲದೇ ಈ ವಿಚಾರದಲ್ಲಿ ಅನಾವಶ್ಯಕವಾಗಿ ಹೇಳಿಕೆ ನೀಡಿ ಪದೇ ಪದೇ ಮುಖ್ಯಮಂತ್ರಿ ಅವರಿಗೆ ತಲೆ ಬಿಸಿ ಮಾಡಬಾರದು. ನಾನು ಉಮೇಶ್ ಕತ್ತಿ ಪರಸ್ಪರ ಆತ್ಮೀಯರು. ನಾವು ಸದಾ ಸಲಿಗೆಯಿಂದ ಮಾತಾಡುತ್ತೇನೆ ಎಂದು ಅವರು ಹೇಳಿದರು.

SCROLL FOR NEXT