ರಾಜಕೀಯ

ಹೈಕಮಾಂಡ್ ಗೆ ನಾಲ್ಕು ತಿಂಗಳ ಸಾಧನೆಯ ವರದಿ ಸಲ್ಲಿಸಲು ದೆಹಲಿಗೆ ಡಿಕೆ ಶಿವಕುಮಾರ್ 

Nagaraja AB

ಬೆಂಗಳೂರು: ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ನಾಲ್ಕು ತಿಂಗಳು ಕಳೆದಿದ್ದು, ನಾಲ್ಕು ತಿಂಗಳ ಪಕ್ಷದ ಸಾಧ‌ನೆ‌ ಪಕ್ಷ‌ ಸಂಘಟನೆಯ ವಿವರ ಸೇರಿದಂತೆ‌ ಪ್ರಸಕ್ತ ರಾಜ್ಯದ ರಾಜಕೀಯ ಸ್ಥಿತಿಗತಿಗಳ ವಿವರಗಳ ವರದಿಯನ್ನು ಪಕ್ಷದ ವರಿಷ್ಠರಿಗೆ ಸಲ್ಲಿಸಲು ಡಿ.ಕೆ.ಶಿವಕುಮಾರ್  ದೆಹಲಿಗೆ ತೆರಳಿದ್ದಾರೆ.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ನಾಯಕ ರಾಹುಲ್ ಗಾಂಧಿ ಆರೋಗ್ಯ ಸರಿಯಿಲ್ಲದ ಕಾರಣ ನೇರ ಭೇಟಿ ಮಾಡಿ ವರದಿ ಸಲ್ಲಿಸಲು ಡಿಕೆಶಿಗೆ ಅವಕಾಶ ಸಿಕ್ಕಿಲ್ಲ. ಇನ್ನೂ ರಾಹುಲ್ ಗಾಂಧಿ ಕೂಡ ಸೋನಿಯಾ ಜೊತೆಯಲ್ಲಿಯೇ ಇದ್ದಾರೆ. ಹೀಗಾಗಿ ನೇರವಾಗಿ ಭೇಟಿಯಾಗದೆ ನಾಳೆ ವೆಬಿನಾರ್ ಮೂಲಕ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

 ಮಂಗಳವಾರ ದೆಹಲಿಯಲ್ಲಿ ಇದ್ದು ವೆಬಿನಾರ್ ಮೂಲಕ ಮಾತುಕತೆ ನಡೆಸಿ, ನಾಲ್ಕು ತಿಂಗಳಲ್ಲಿ ಪಕ್ಷದ ಅಧ್ಯಕ್ಷರಾಗಿ ತಾವು ಕೈಗೊಂಡ ಕ್ರಮಗಳು, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪಕ್ಷದ ವತಿಯಿಂದ ಮಾಡಿದ ಕಾರ್ಯಗಳು ಹಾಗೂ ಸರ್ಕಾರದ ವಿರುದ್ಧ ಮಾಡಿರುವ ಹೋರಾಟಗಳ ಕುರಿತು ವಿವರಿಸಲಿದ್ದಾರೆ.

SCROLL FOR NEXT