ರಾಜಕೀಯ

ಕಲಬುರಗಿ: ಚುನಾವಣೆಗೂ ಮುನ್ನವೇ ನಾಲ್ಕು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳು ಹರಾಜು

Shilpa D

ಕಲಬುರಗಿ: ಡಿಸೆಂಬರ್ 27 ರಂದು ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆಯಲಿದೆ, ಆದರೆ ಜನಪ್ರತಿನಿಧಿ ಕಾಯ್ದೆ ನಿಯಮ ಉಲ್ಲಂಘಿಸಿ ಯಡ್ರಾಮಿ ಗ್ರಾಮದ ನಾಲ್ಕು ಸದಸ್ಯ ಸ್ಥಾನಗಳನ್ನು ಹರಾಜು ಹಾಕಲಾಗಿದೆ.

ಹರಾಜಿನ ವಿಡಿಯೋ ಸೋಮವಾರ ವೈರಲ್ ಆಗಿದ್ದು, ಈ ಸಂಬಂಧ ಚುನಾವಣಾಧಿಕಾರಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ, 'ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನವನ್ನು ಪರಿಶಿಷ್ಟ ಜಾತಿಯ ವ್ಯಕ್ತಿ  8.55 ಲಕ್ಷಕ್ಕೆ, ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ  7.25 ಲಕ್ಷ, ಪರಿಶಿಷ್ಟ ಜಾತಿ ಪುರುಷ ಸ್ಥಾನಕ್ಕೆ  5.50 ಲಕ್ಷ. ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ  5.25 ಲಕ್ಷ ನೀಡಲು ಹರಾಜು ಕೂಗಲಾಗಿದೆ' ಎಂದು ಗ್ರಾಮದ ಕೆಲವರು ಆರೋಪಿಸಿದ್ದಾರೆ.

'ಹರಾಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ನಿಗದಿತ ದಿನಾಂಕದಂದು ಹಣ ಪಾವತಿಸದಿದ್ದಲ್ಲಿ, ಸ್ಥಾನಗಳು ಬೇರೆಯವರ ಪಾಲಾಗುತ್ತವೆ ಎಂದು ಗ್ರಾಮದ ಮುಖಂಡರು ಷರತ್ತು ವಿಧಿಸಿದ್ದಾರೆ.  ಯಡ್ರಾಮಿ ಉಪ ತಹಶೀಲ್ದಾರ್ ದೂರು ದಾಖಲಿಸಿದ್ದು, ರಮಣ ಗೌಡ ನಾಗರಳ್ಳಿ, ಹೊನ್ನಪ್ಪ ಗೌಡ ಕೊಡಮನಳ್ಳಿ, ಮಡಿವಲಪ್ಪ ಪಡಶೆಟ್ಟಿ, ಮಲ್ಲು ಕೊಡಮನಳ್ಳಿ, ಗೌಡಪ್ಪಗೌಡ ಬೊಮ್ಮನಳ್ಳಿ ಮತ್ತು ಹರಾಜಿನ ಭಾಗವಾಗಿದ್ದ ಬಸಪ್ಪಗೌಡ ನವಾನೆ ಅವರನ್ನು ದೂರಿನಲ್ಲಿ ಹೆಸರಿಸಲಾಗಿದೆ.

SCROLL FOR NEXT