ಬೆಂಗಳೂರು: ಸಾರಿಗೆ ನೌಕರರ ಪ್ರತಿಭಟನೆ ನಿರ್ವಹಿಸುವುದರಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಸೋತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಪ್ರಯಾಣಿಕರ ಪರದಾಟ, ಅನನುಭವಿ ಖಾಸಗಿ ಚಾಲಕರ ಪೀಕಲಾಟ, ಸರ್ಕಾರದ ಮೊಂಡು ಹಠ, ಖಾಸಗಿ ಬಸ್ ಮಾಲೀಕರ ನಿರಾಕರಣೆ…ಲಕ್ಷ್ಮಣ ಸವದಿ ಅವರೇ ಬಿಕ್ಕಟ್ಟುಗಳನ್ನು ನಿರ್ವಹಿಸುವುದೆಂದರೆ ಸದನದಲ್ಲಿ ಕೂತು ಮೊಬೈಲ್'ನಲ್ಲಿ "ರೋಮಾಂಚನದ" ಚಿತ್ರ ವೀಕ್ಷಿಸಿದಂತಲ್ಲ ಎಂದು ಕುಟುಕಿದೆ.
ಕೊರೊನ ಸಂದರ್ಭದಲ್ಲಿ ಸಾರಿಗೆ ನೌಕರರ ಸೇವೆಯನ್ನು ಸಮಾಜ ಮರೆಯಲು ಸಾಧ್ಯವಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ವೇತನ ಸಿಗದೆ ನಿಮ್ಮ ಮನೆಯಲ್ಲಿ ತೊಂದರೆಯಾದಾಗ, ಸರ್ಕಾರ ಎಲ್ಲಾ ವೃತ್ತಿಪರ ಕಾರ್ಮಿಕರಿ ಕನಿಷ್ಠ 10,000 ಪರಿಹಾರ ಕೊಡುವಂತೆ ಆಗ್ರಹಿಸಿ ಹೋರಾಟ ಮಾಡಿದೆವು. ಆದರೆ ಸರ್ಕಾರ ಸ್ಪಂದಿಸಲೇ ಇಲ್ಲ ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದೆ