ಸಾಂದರ್ಭಿಕ ಚಿತ್ರ 
ರಾಜಕೀಯ

80ರ ಇಳಿವಯಸ್ಸಿನಲ್ಲೂ ಬತ್ತದ ಉತ್ಸಾಹ: 1978 ರಿಂದಲೂ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧೆ!

ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾಗಿ ಮತ್ತೆ ಆಯ್ಕೆ ಬಯಸಿ ರೆಡ್ಡಿ ವೀರರಾಜು ಅವರು ತಮ್ಮ 80ರ ಇಳಿವಯಸ್ಸಿನಲ್ಲಿಯೂ ಚುನಾವಣಾ ಕಣಕ್ಕಳಿದಿದ್ದಾರೆ.

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿ ತಾಲೂಕಿನ ಶ್ರೀರಾಮನಗರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾಗಿ ಮತ್ತೆ ಆಯ್ಕೆ ಬಯಸಿ ರೆಡ್ಡಿ ವೀರರಾಜು ಅವರು ತಮ್ಮ 80ರ ಇಳಿವಯಸ್ಸಿನಲ್ಲಿಯೂ ಚುನಾವಣಾ ಕಣಕ್ಕಳಿದಿದ್ದಾರೆ.

ಪ್ರಸ್ತುತ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶ್ರೀರಾಮನಗರ ಗ್ರಾ.ಪಂ. ಶ್ರೀರಾಮನಗರ ಗ್ರಾಮದ 7ನೇ ಅಭ್ಯರ್ಥಿಯಾಗಿರುವ ಇವರು ಚುನಾವಣೆ ರಾಜಕಾರಣದಲ್ಲಿ ದಣಿವರಿಯದೇ ತಮ್ಮ 80ನೇ ವಯಸ್ಸಿನಲ್ಲಿ  ಸ್ಪರ್ಧಿಸುವ ಮೂಲಕ ಪಂಚಾಯಿತಿ ಚುನಾವಣೆಗೆ ರಂಗು ತಂದಿದ್ದಾರೆ. 

1978 ರಲ್ಲಿ ಶ್ರೀರಾಮನಗರ ವಾರ್ಡ್ ಆಗಿ ರಚನೆಯಾದಾಗಿನಿಂದ 6 ಬಾರಿ ಅವಿರೋಧವಾಗಿ ರೆಡ್ಡಿ ವೀರರಾಜು ಆಯ್ಕೆಯಾಗಿದ್ದಾರೆ. ಇವರ ಸಾಮಾಜಿಕ ಕಾಳಜಿ ಹಾಗೂ ಜನರ ಸೇವೆಯ ಮಾಡುವ ಮನಸ್ಸು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಆದರೆ ಇತ್ತೀಚಿನ ಚುನಾವಣೆಗಳಲ್ಲಿ ಬಹು ದೊಡ್ಡ ಬದಲಾವಣೆಯಾಗಿದ್ದು, ಇಂದಿನ ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲಕ್ಕೆ ಹೆಚ್ಚು ಮಹತ್ವ. ಆದರೆ ನಮ್ಮ ಜನ ನನ್ನ ಮೇಲೆ ವಿಶ್ವಾಸ ಇರಿಸಿರುವುದಕ್ಕೆ ನಾನು ಇಲ್ಲಿಯವರೆಗೆ ಆಯ್ಕೆಯಾಗಿದ್ದೇನೆ ಎಂದು ರೆಡ್ಡಿ ವೀರರಾಜು ತಿಳಿಸಿದ್ದಾರೆ.  ಅವರ ಮಗ ಕನಕಗಿರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವುದರಿಂದ ಈ ಬಾರಿಯೂ ಅವರು ಗೆಲುವು ಸಾಧಿಸುವ ನಿರೀಕ್ಷೆಯಿದೆ ಎಂದು ರಾಜಕೀಯ ವೀಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT