ವಿಧಾನಪರಿಷತ್ ನಲ್ಲಿ ಸದಸ್ಯರ ನಡೆಯ ಚಿತ್ರ 
ರಾಜಕೀಯ

ಬಿಜೆಪಿ, ಜೆಡಿಎಸ್ ಸದಸ್ಯರ ವಿರುದ್ಧ ಕ್ರಮಕ್ಕೆ ಸಭಾಪತಿಗೆ ಕಾಂಗ್ರೆಸ್ ದೂರು

ಇದೇ ಡಿಸೆಂಬರ್ 15 ರಂದು ನಡೆದ ವಿಧಾನ ಪರಿಷತ್ ಗದ್ದಲ, ಕೋಲಾಹಲದ ವೇಳೆ ಅಂಸವಿಧಾನಿಕವಾಗಿ ನಡೆದುಕೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸಭಾಪತಿಗೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು: ಇದೇ ಡಿಸೆಂಬರ್ 15 ರಂದು ನಡೆದ ವಿಧಾನ ಪರಿಷತ್ ಗದ್ದಲ, ಕೋಲಾಹಲದ ವೇಳೆ ಅಂಸವಿಧಾನಿಕವಾಗಿ ನಡೆದುಕೊಂಡ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಸದಸ್ಯ ಪಿ.ಆರ್. ರಮೇಶ್ ಸಭಾಪತಿಗೆ ದೂರು ಸಲ್ಲಿಸಿದ್ದಾರೆ.

ಡಿಸೆಂಬರ್ 15 ರಂದು ಸಭಾಪತಿ ಸದನಕ್ಕೆ ಹಾಜರಾಗುವ ಮಾಹಿತಿ ಇದ್ದರೂ, ನಿಯಮ ಬಾಹಿರವಾಗಿ ಉಪ ಸಭಾಪತಿ ಧರ್ಮೇಗೌಡ ಸಭಾಪತಿ ಪೀಠದ ಮೇಲೆ ಬಂದು ಕುಳಿತುಕೊಂಡಿದ್ದು, ಅವರಿಗೆ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥ್ ನಾರಾಯಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಸಭಾಪತಿಗಳು ಸದನದ ಒಳಗೆ ಪ್ರವೇಶಿಸದಂತೆ ತಡೆಯಲು ಕಾನೂನು ಕೈಗೆತ್ತಿಕೊಂಡು, ಬಲಪ್ರಯೋಗ ಮಾಡಿ ಅಹಿತಕರವಾಗಿ ನಡೆದುಕೊಂಡ ಬಿಜೆಪಿ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಾಪುರ್ ಹಾಗೂ ಪ್ರಾಣೇಶ್ ಅವರನ್ನು ಸದನದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. 

ಸಭಾಪತಿಗಳ ಪೀಠದ ಸುತ್ತಲೂ ಗುಂಪುಗೂಡಿ, ಹಿರಿಯ ಸದಸ್ಯರ ಮೇಲೆ ಬಲ ಪ್ರಯೋಗ ಮಾಡಿದ ಬಿಜೆಪಿ ಸದಸ್ಯರಾದ ಅಯನೂರು ಮಂಜುನಾಥ, ರವಿಕುಮಾರ್, ತೇಜಸ್ವಿನಿಗೌಡ, ಪುಟ್ಟಣ್ಣ, ಸುನೀಲ್ ವಲ್ಯಾಪುರೆ ಹಾಗೂ ಜೆಡಿಎಸ್‌ನ ಸದಸ್ಯರಾದ ಗೋವಿಂದರಾಜು, ರಮೇಶ್ ಗೌಡ, ಶ್ರೀಕಂಠೇಗೌಡ ಹಾಗೂ ಅಸಂಸದೀಯ ಚಟುವಟಿಕೆಗಳಲ್ಲಿ ತೊಡಗಿದ್ದ ಇತರ ಸದಸ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Nepal: 80 ಸೇತುವೆಗಳು ಹಾನಿ, 40 ಕಿ.ಮೀ ರಸ್ತೆಗಳು ನಾಶ

ನೇಪಾಳ ಭೀಕರ ಪ್ರವಾಹದಲ್ಲಿ ಕೊಚ್ಚಿ ಹೋದವು ಒಂಬತ್ತು ಜಲವಿದ್ಯುತ್ ಕೇಂದ್ರಗಳು!

ದಿಢೀರ್‌ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!