ರಾಜಕೀಯ

ಬಳ್ಳಾರಿ ವಿಭಜನೆ ತಂತ್ರ: ಆಂಧ್ರಪ್ರದೇಶದ ರಾಜಕೀಯ ಪಕ್ಷಗಳಿಗೆ ರಹದಾರಿ

Shilpa D

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ಎರಡು ಸಣ್ಣ ಭಾಗವಾಗಿ ವಿಭಜಿಸುವುದರಿಂದ ಆಡಳಿತವನ್ನು ಸುಗಮಗೊಳಿಸಬಹುದು ಎಂಬ ಆಲೋಚನೆಯಿದ್ದು ಅದರಿಂದ ಹಲವಾರು ಪ್ರಯೋಜನಗಳಿವೆ ಎಂಬುದನ್ನು ವಕೀಲರು ತಿಳಿಸುತ್ತಾರೆ. ಆದರೆ ರಾಜಕೀಯ ತಜ್ಞರ ಅಭಿಪ್ರಾಯವೇ ಬೇರೆಯೇ ಇದೆ, ಬಳ್ಳಾರಿ ರಾಜಕೀಯಕ್ಕೆ ಆಂಧ್ರಪ್ರದೇಶ ನಾಯಕರು ಪ್ರವೇಶಿಸಲು ಹಾದಿ ಸುಗಮವಾಗಿದೆ ಎಂದು ಹೇಳುತ್ತಾರೆ.

ಇಲ್ಲಿ ರಾಜಕೀಯ ಆಕಾಂಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರ ಜೊತೆಗೆ, ಇದು ಹೆಚ್ಚಾಗಿ ತೆಲುಗು ಮಾತನಾಡುವ ಪಟ್ಟಿಯಲ್ಲಿ ಭಾಷಾ ವಿಭಜನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹಿರಿಯ ವಕೀಲ ಪನ್ನಗರಾಜ್ ಹೇಳಿದ್ದಾರೆ. 

ಬಳ್ಳಾರಿ ವಿಭಜನೆ ಖಂಡಿತವಾಗಿಯೂ ಜಿಲ್ಲೆಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಸಂವಿಧಾನದ ಪ್ರಕಾರ, ದೇಶದ ಯಾವುದೇ ಪ್ರಜೆ ಯಾವುದೇ ಸ್ಥಳದಲ್ಲಿ ಚುನಾವಣೆಗೆ ನಿಲ್ಲಲು ಅವಕಾಶವಿದೆ.

ಹೀಗಾಗಿ ಬಳ್ಳಾರಿ ವಿಭಜನೆಯಿಂದ ಆಂಧ್ರ ಪ್ರದೇಶದ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕಿಳಿಸಬಹುದಾಗಿದೆ. ಕೆಲವು ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜಕಾರಣಿಗಳು ಬಳ್ಳಾರಿಯನ್ನು ತಮ್ಮ ರಾಜ್ಯಕ್ಕೆ ಸೇರಿಸುವಂತೆ ಒತ್ತಾಯಿಸಿದ್ದರು, ಆದರೆ ಅಂತಹ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಲಾಯಿತು.

ಬಳ್ಳಾರಿ ಜಿಲ್ಲೆ ರಾಯಲಸೀಮೆಯ ಒಂದು ಭಾಗ, ಇಲ್ಲಿರುವ ತೆಲುಗು ಮಾತನಾಡುವ ಜನರ ಮೇಲೆ ಆಂಧ್ರ ರಾಜಕಾರಣಿಗಳ ದೃಷ್ಟಿಯಿದೆ, ಬಳ್ಳಾರಿಯಲ್ಲಿ ನಡೆಯುವ ಮುಂದಿನ ಚುನಾವಣೆಗಳಲ್ಲಿ ವೈಎಸ್ ಆರ್ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದರಲ್ಲಿ ಯಾವುದೇ ಅಚ್ಚರಿಯಿಲ್ಲ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಯಂತೆ ಇಲ್ಲಿಯೂ ಗಡಿ ಮತ್ತು ಭಾಷೆಯ ವಿಷಯಗಳಲ್ಲಿ ಮತಗಳನ್ನು ಬಂಡವಾಳ ಮಾಡಲು ಪಕ್ಷಗಳು ಪ್ರಯತ್ನಿಸುತ್ತವೆ, ಬಳ್ಳಾರಿಯಲ್ಲೂ ಇದೇ ಪರಿಸ್ಥಿತಿ ಸಾಧ್ಯತೆ ವಿವರಿಸಿದ್ದಾರೆ. ಹಲವು ದಶಕಗಳಲ್ಲಿ ಬಳ್ಳಾರಿಯಲ್ಲಿ ಕನ್ನಡ ಮಾತನಾಡದ ಜನರಿದ್ದಾಗ ಇದೇ ಸ್ಥಿತಿಯಿತ್ತು ಎಂದು ವಕೀಲರು ತಿಳಿಸಿದ್ದಾರೆ.

SCROLL FOR NEXT