ರಾಜಕೀಯ

ಸಚಿವಾಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಯಡಿಯೂರಪ್ಪ ಹರಸಾಹಸ; ಬಿಕ್ಕಟ್ಟು ಮುಂದುವರಿಕೆ

Srinivasamurthy VN

ಬೆಂಗಳೂರು: ಒಂದು ಕಡೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಹೈಕಮಾಂಡ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದ ಖುಷಿಯಲ್ಲಿದ್ದರೆ, ಮತ್ತೊಂಡೆಗೆ ಸಚಿವಾಕಾಂಕ್ಷಿಗಳಿಂದ ಹೆಚ್ಚುತ್ತಿರುವ ಒತ್ತಡದಿಂದ ಯಡಿಯೂರಪ್ಪ ಕಂಗಾಲಾಗಿದ್ದಾರೆ. ಇದನ್ನು ನಿಭಾಯಿಸಲು ಮುಖ್ಯಮಂತ್ರಿ ಹರಸಾಹಸ ಪಡುತ್ತಿದ್ದಾರೆ.

ಆಪ್ತ ಶಾಸಕರು ಸೇರಿದಂತೆ ಪಕ್ಷದಲ್ಲಿ ಹಿರಿಯರು ಹಾಗೂ ನೂತನ ಶಾಸಕರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ನಿನ್ನೆ ಇಡೀ ದಿನ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲೇ ವಿಶ್ರಾಂತಿ ನೆಪದಲ್ಲಿ ಉಳಿದುಕೊಂಡಿದ್ದು, ಅಲ್ಲಿಂದಲೇ ಕೆಲವು ಸಚಿವಾಕಾಂಕ್ಷಿಗಳಿಗೆ ದೂರವಾಣಿ ಕರೆ ಮಾಡಿ ಸಮಾಧಾನ ಪಡಿಸುವ ಯತ್ನ ಮಾಡಿದ್ದಾರೆ ಎನ್ನಲಾಗಿದೆ.

ಮೂಲ ಬಿಜೆಪಿ ಶಾಸಕರ ಪೈಕಿ ಹಿರಿಯರಾದ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೆಶ್ವರ್ ಮತ್ತು ಮತ್ತೋರ್ವರಿಗೆ ಸಚಿವ ಸ್ಥಾನ ನಿಗದಿಯಾಗಿದೆ. ಇದನ್ನು ಅರಿತಿರುವ ಮೂಲ ಬಿಜೆಪಿಯ ಸಚಿವಾಕಾಂಕ್ಷಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ನಿನ್ನೆ ಇಡೀ ದಿನ ಅವರನ್ನು ಮುಖ್ಯಮಂತ್ರಿ ಸಮಾಧಾನ ಪಡಿಸುವ ತಂತ್ರ ಮಾಡಿದ್ದಾರೆ. ಒಂದು ವೇಳೆ ಅವರು ಮುಖ್ಯಮಂತ್ರಿಯ ಸೂತ್ರಕ್ಕೆ ಒಪ್ಪಿದರೆ ನಾಳೆಯೇ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಬಿಕ್ಕಟ್ಟು ಮುಂದುವರಿದರೆ ಇನ್ನೂ ಒಂದು ವಾರ ಮುಂದಕ್ಕೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.

SCROLL FOR NEXT