ವಿಧಾನ ಸೌಧ 
ರಾಜಕೀಯ

ನೂತನ ಸಚಿವರಿಗೆ ವಿಧಾನಸೌಧ,  ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ

ನೂತನ 10 ಮಂದಿ ಸಚಿವರಿಗೂ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ‌ ಮಾಡಲಾಗಿದೆ. ಸಚಿವ ಎಸ್ ಟಿ ಸೋಮಶೇಖರ್ ಗೆ ವಿಕಾಸಸೌಧ 38-39 ಕೊಠಡಿ ಹಂಚಲಾಗಿದೆ.

ಬೆಂಗಳೂರು: ನೂತನ 10 ಮಂದಿ ಸಚಿವರಿಗೂ ವಿಧಾನಸೌಧ ಹಾಗೂ ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ‌ ಮಾಡಲಾಗಿದೆ. ಸಚಿವ ಎಸ್ ಟಿ ಸೋಮಶೇಖರ್ ಗೆ ವಿಕಾಸಸೌಧ 38-39 ಕೊಠಡಿ ಹಂಚಲಾಗಿದೆ.

ಸಚಿವ ರಮೇಶ ಜಾರಕಿಹೊಳಿಗೆ ವಿಧಾನಸೌಧದ 342-342ಎ ಕೊಠಡಿಯನ್ನು ಹಂಚಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾಸೌಧದ 323 ಎ ಕೊಠಡಿಯಲ್ಲಿರುತ್ತಾರೆ.

ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ 340A, 341, ಡಾ. ಅಶ್ವತ್ಥ್ ನಾರಾಯಣ್ ವಿಕಾಸಸೌಧದ 242, 243 ಮತ್ತು ಲಕ್ಷ್ಮಣ ಸವದಿ ಅವರಿಗೆ ವಿಕಾಸಸೌಧದ 344, 345 ಕೊಠಡಿಗಳನ್ನು ಹಂಚಲಾಗಿದೆ. 

ರಮೇಶ್ ಜಾರಕಿಹೊಳಿ, ಶಿವರಾಂ ಹೆಬ್ಬಾರ್, ಕೆ. ಸುಧಾಕರ್, ಶ್ರೀಮಂತ್ ಪಾಟೀಲ್, ಬೈರತಿ ಬಸವರಾಜ್ ಮತ್ತು ಕೆ. ಗೋಪಾಲಯ್ಯ ಅವರಿಗೆ ವಿಧಾನಸೌಧದಲ್ಲಿ ಕೊಠಡಿಗಳನ್ನು ಹಂಚಿಕೆ ಮಾಡಲಾಗಿದೆ. ಖಾತೆ ಹಂಚಿಕೆಯಾದ ಬಳಿಕ ಈ ಕೊಠಡಿಗಳಿಗೆ ಅವರ ಖಾತೆಯ ನಾಮಫಲಕ ಅಳವಡಿಕೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!