ಸಚಿವ ಆನಂದ್ ಸಿಂಗ್ , ಮಾಜಿ ಸಿಎಂ ಸಿದ್ದರಾಮಯ್ಯ 
ರಾಜಕೀಯ

ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವ ಮಾಡಿ 'ಕುರಿ ಕಾಯಲು ತೋಳವನ್ನು ಬಿಟ್ಟಂತೆ' ಆಗಿದೆ:ಸಿದ್ದರಾಮಯ್ಯ

ನೂತನ ಸಚಿವ ಆನಂದ್ ಸಿಂಗ್ ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15 ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವರನ್ನಾಗಿ ಮಾಡಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.

ಬೆಂಗಳೂರು: ನೂತನ ಸಚಿವ ಆನಂದ್ ಸಿಂಗ್ ಗೆ ಅರಣ್ಯ ಖಾತೆ ನೀಡಿರುವುದಕ್ಕೆ ವಿರೋಧ ಪಕ್ಷದ ನಾಯಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆ ಸೇರಿದಂತೆ 15 ಕೇಸುಗಳನ್ನು ಎದುರಿಸುತ್ತಿರುವ ಆನಂದ್ ಸಿಂಗ್ ಅವರನ್ನು ಅರಣ್ಯ ಖಾತೆ ಸಚಿವರನ್ನಾಗಿ ಮಾಡಿದ್ದು ಎಷ್ಟು ಸರಿ ಎಂದು ಕೇಳುತ್ತಿದ್ದಾರೆ.


ಬಳ್ಳಾರಿಯ ವಿಜಯನಗರ ಕ್ಷೇತ್ರದ ಶಾಸಕರಾಗಿರುವ ಆನಂದ್ ಸಿಂಗ್ ಗೆ ಇತ್ತೀಚೆಗೆ ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ ಆರಂಭದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ನೀಡಲಾಗಿತ್ತು. ಆದರೆ ಕೇವಲ 24 ಗಂಟೆಗಳಲ್ಲಿಯೇ ಅವರ ಖಾತೆ ಬದಲಾವಣೆಯಾಗಿ ಅರಣ್ಯ ಖಾತೆ ನೀಡಲಾಗಿದೆ. 


ಅವರು ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ಟಿನಲ್ಲಿ 15 ಕೇಸುಗಳು ಅವರ ವಿರುದ್ಧ ವಿಚಾರಣೆಗೆ ಬಾಕಿಯಿವೆ. ಮೀಸಲು ಅರಣ್ಯದಲ್ಲಿ ನಿಷೇಧಕಾರಿ ಚಟುವಟಿಕೆಗಳನ್ನು ನಡೆಸಿದ ಆರೋಪಗಳು ಅವರ ಮೇಲಿದೆ. ಹೀಗಿರುವಾಗ ಅರಣ್ಯ ಖಾತೆ ಅವರಿಗೆ ನೀಡಿದ್ದು ಅವರ ಮೇಲಿನ ಕೇಸುಗಳನ್ನು ಮುಚ್ಚಿ ಹಾಕಲೇ ಎಂಬ ಆರೋಪ ಕೇಳಿಬರುತ್ತಿದೆ.


ಈ ಬಗ್ಗೆ ನಿನ್ನೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಕಚೇರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕುರಿ ಕಾಯಲು ತೋಳವನ್ನು ಬಿಟ್ಟಂತೆ ಆಗಿದೆ. ಇದನ್ನು ಒಪ್ಪಲು ಖಂಡಿತಾ ಸಾಧ್ಯವಿಲ್ಲ ಎಂದರು. 15 ಕೇಸುಗಳು ಅವರ ಮೇಲಿರುವಾಗ ಆನಂದ್ ಸಿಂಗ್ ಗೆ ಅರಣ್ಯ ಖಾತೆ ನೀಡಿದ್ದು ಸರಿಯಲ್ಲ, ಅರಣ್ಯ ಕಾಯ್ದೆಯಡಿ ಗಂಭೀರ ಆರೋಪ ಎದುರಿಸುತ್ತಿರುವವರನ್ನು ಅದೇ ಖಾತೆಯ ಸಚಿವರನ್ನಾಗಿ ಹೇಗೆ ನೇಮಕ ಮಾಡಲಾಗುತ್ತದೆ ಎಂದು ಕೇಳಿದ್ದಾರೆ.ಕರ್ನಾಟಕ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸಿಎಂ ಅವರನ್ನು ಈ ಕುರಿತು ಟೀಕಿಸಿದೆ.


ಜೆಡಿಎಸ್ ಕೂಡ ಸಿಎಂ ನಿರ್ಧಾರವನ್ನು ಖಂಡಿಸಿದೆ. ನೂತನ ಸಚಿವರು ಬಿಜೆಪಿಗೆ ಸೇರಿದ್ದು ಅಧಿಕಾರದಾಹ ಮತ್ತು ದುಡ್ಡು ಮಾಡಲು. ಇಂತವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ಅರಣ್ಯ ಕಾಯ್ದೆಯಡಿ ಆರೋಪ ಎದುರಿಸುತ್ತಿರುವವರು ಅರಣ್ಯ ಸಚಿವರೇ ಆಗುತ್ತಾರೆ ಎಂದರೆ ತಮ್ಮ ಮೇಲಿನ ಕೇಸನ್ನು ಮುಚ್ಚಿ ಹಾಕಲು ಅವರು ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಬಹುದಲ್ಲವೇ ಎಂದು ಜೆಡಿಎಸ್ ನಾಯಕ ರಮೇಶ್ ಬಾಬು ಕೇಳುತ್ತಾರೆ.


ಕಾರ್ಯಕರ್ತ ಹಾಗೂ ಅಡ್ವೊಕೇಟ್ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿ, ಆನಂದ್ ಸಿಂಗ್ ವಿರುದ್ಧ ಅಕ್ರಮ ಗಣಿಗಾರಿಕೆ ಮತ್ತು ರಫ್ತು, ಅರಣ್ಯ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಾಣೆ ಮಾಡಿರುವುದು ಸೇರಿದಂತೆ 15 ಕೇಸುಗಳು ವಿಚಾರಣೆ ಬಾಕಿ ಉಳಿದಿವೆ. ಕರ್ನಾಟಕ ಅರಣ್ಯ ಕಾಯ್ದೆಯಡಿ ಕೂಡ ಅವರ ವಿರುದ್ಧ ಕೇಸುಗಳಿವೆ ಎಂದಿದ್ದಾರೆ.


ಆದರೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆನಂದ್ ಸಿಂಗ್ ಪರವಾಗಿ ಮಾತನಾಡಿದ್ದಾರೆ. ಅವರ ಮೇಲಿನ ಈ ಯಾವ ಆರೋಪಗಳು ಕೂಡ ಸಾಬೀತಾಗಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

'ವೃದ್ಧ ಸಮಾಜದತ್ತ ಶ್ರೀಲಂಕಾ': ಅತ್ಯಂತ ವೇಗವಾಗಿ ಹೆಚ್ಚುತ್ತಿದೆ ಹಿರಿಯರ ಸಂಖ್ಯೆ; 40 ವರ್ಷಗಳಲ್ಲಿ ಮೂರು ಪಟ್ಟು ಜಾಸ್ತಿ!

ನಮಸ್ತೆ.. ಏನ್ರೀ ರಾಹುಲ್ ಹೇಗಿದ್ದೀರಾ? ; ಸಂಸತ್ ಭವನದ ಬಳಿ ಪ್ರಧಾನಿ ಮೋದಿ-Rahul Gandhi ಅಪರೂಪದ ಮುಖಾಮುಖಿ! Video

SCROLL FOR NEXT