ಯಡಿಯೂರಪ್ಪ 
ರಾಜಕೀಯ

ಸ್ವಪಕ್ಷೀಯರಿಂದ ಸಿಎಂ ವಿರುದ್ಧ ತಂತ್ರ: ಹರಿದಾಡುತ್ತಿದೆ ಅನಾಮಧೇಯ ಪತ್ರ; ಲೆಟರ್ ಹಿಂದೆ ಯಾರ ಪಾತ್ರ?

ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಅಧಿವೇಶನದ ಸಂದರ್ಭದಲ್ಲಿ ಅನಾಮಧೇಯ ಪತ್ರವೊಂದು ಬಂದಿದೆ. ಸಿಎಂ ಯಡಿಯೂರಪ್ಪ ಅವರಗೆ ವಯಸ್ಸಾಯಿತು. ಸಿಎಂ ಕುರ್ಚಿ ಬಿಟ್ಟು ರಾಜ್ಯಪಾಲರಾಗಿ ಎಂದು  ಪತ್ರ  ಹೇಳಿದೆ.

ಬೆಂಗಳೂರು:  ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ಅಧಿವೇಶನದ ಸಂದರ್ಭದಲ್ಲಿ ಅನಾಮಧೇಯ ಪತ್ರವೊಂದು ಬಂದಿದೆ. ಸಿಎಂ ಯಡಿಯೂರಪ್ಪ ಅವರಗೆ ವಯಸ್ಸಾಯಿತು. ಸಿಎಂ ಕುರ್ಚಿ ಬಿಟ್ಟು ರಾಜ್ಯಪಾಲರಾಗಿ ಎಂದು  ಪತ್ರ  ಹೇಳಿದೆ.

ಪುತ್ರ ವಿಜಯೇಂದ್ರ ವರ್ಗಾವಣೆ ಯಲ್ಲಿ ಕೈ ಆಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಮೊದಲು ಬಿಎಸ್ ವೈ ಅವರನ್ನು ಹೊಗಳಿದ 4 ಪುಟಗಳ ಪತ್ರ ನಂತರ ಬಿಎಸ್ ವೈ ಅವರನ್ನು ಟೀಕೆ ಮಾಡುತ್ತಿದೆ.ಒಟ್ಟು ನಾಲ್ಕು ಪುಟಗಳ ಪತ್ರದಲ್ಲಿ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನೇ ಗುರಿಯಾಗಿಸಿಕೊಂಡು ಬರೆದಿರುವ ಈ ಪ್ರಕಟಣೆ ಮಂಗಳವಾರ ಮಾಧ್ಯಮ ಸಂಸ್ಥೆಗಳ ಕೈಸೇರಿದ್ದು, ಇದುವರೆಗೂ ಯಾರೊಬ್ಬರೂ ಅದರ ಹೊಣೆ ಹೊತ್ತಿಲ್ಲ. ಕೆಲವೆಡೆ ವ್ಯಂಗ್ಯವಾಗಿ ಅವರಿಬ್ಬರನ್ನೂ ಹೊಗಳಿದಂತೆ ಬರೆದು ತೆಗಳಲಾಗಿದೆ.

ವಂಶಾಡಳಿತ, ಸ್ವಾರ್ಥ ರಾಜಕಾರಣ ಮತ್ತು ಕುಟುಂಬ ವ್ಯಾಮೋಹಕ್ಕೆ ಬಿಜೆಪಿಯಲ್ಲಿ ಅವಕಾಶವಿಲ್ಲ. ಸ್ವಜಾತಿ ಪ್ರೇಮ ಮೆರೆಯುವುದು ಜನಹಿತವಲ್ಲ. ಮುಂದಿನ ವಾರ 77ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಯೋವೃದ್ಧ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯ ಬಿಟ್ಟು ಮಾರ್ಗದರ್ಶಕರಾಗಿರುವುದು ಒಳ್ಳೆಯದು. ಅವರಿಗೆ ರಾಜ್ಯಪಾಲ ಹುದ್ದೆಯನ್ನು ನೀಡುವ ಮೂಲಕ ಗೌರವಿಸಿ ಅವರ ಅನುಭವ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

ವಿಜಯೇಂದ್ರ ಅವರನ್ನು ಸೂಪರ್‌ ಸಿಎಂ, ಡಿಫ್ಯಾಕ್ಟೊಸಿಎಂ ಎಂದು ಸ್ವಪಕ್ಷೀಯರು ಹಾಗೂ ಪ್ರತಿಪಕ್ಷದವರು ನೇರ ಆರೋಪ ಮಾಡುವುದು ನಮ್ಮ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಶಿವಾನಂದ ವೃತ್ತದ ಬಳಿಯ ಅವರ ಆದರ್ಶ ರೋಸ್‌ ಅಪಾರ್ಟ್‌ಮೆಂಟ್‌ ಶಕ್ತಿ ಕೇಂದ್ರವಾಗಿದೆ. ತಮ್ಮನ್ನು ಭೇಟಿ ಮಾಡುವ ಸಚಿವರು, ಶಾಸಕರು, ಅಧಿಕಾರಿಗಳು ಹಾಗೂ ಉದ್ದಿಮೆದಾರರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪುತ್ರ ವಿಜಯೇಂದ್ರ ಅವರನ್ನು ಭೇಟಿ ಮಾಡಲು ಕಳುಹಿಸುತ್ತಾರೆ. ಸಂಜೆಯಾದರೆ ಪಂಚತಾರಾ ಹೋಟೆಲ್‌ನಲ್ಲಿ ವಿಜಯೇಂದ್ರ ಅವರನ್ನು ಕಾಣಬೇಕು ಎಂಬ ಮಾತಿದೆ ಎಂದೂ ಪ್ರಸ್ತಾಪಿಸಲಾಗಿದೆ.

ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಮಾತನಾಡಿ, ಇದು ಅನಾಮಧೇಯ ಪತ್ರ ಅಷ್ಟೇ. ಇಂತಹ ಪತ್ರಗಳು, ಸಣ್ಣ ಸಣ್ಣ ಪ್ರಯತ್ನಗಳು, ತಂತ್ರಗಳು ನಡೆಯುತ್ತಲೇ ಇರುತ್ತವೆ. ಇದ್ಯಾವುದಕ್ಕೂ ತಿರುಳಿಲ್ಲ. ಇದು ಗಾಳಿ ಮಾತು. ಇಂತಹ ಗಾಳಿ ಮಾತನ್ನ ಸೃಷ್ಟಿಮಾಡುತ್ತಿರುವುದು ವಿರೋಧ ಪಕ್ಷದವರು. ನಮ್ಮ ಪಕ್ಷದೊಳಗೆ ಇಂಥದಕ್ಕೆ ಯಾವುದಕ್ಕೂ ಅವಕಾಶ ಇಲ್ಲ ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT