ಎಂಟಿಬಿ ನಾಗರಾಜ್ - ಬಚ್ಚೇಗೌಡ 
ರಾಜಕೀಯ

ಸಿಎಂ ಯಡಿಯೂರಪ್ಪ ನಿವಾಸದಲ್ಲಿ ಎಂಟಿಬಿ - ಬಚ್ಚೇಗೌಡ ಮುಖಾಮುಖಿ..!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಸಂಸದ‌ ಬಚ್ಚೇಗೌಡ ಹಾಗೂ ಅವರ ರಾಜಕೀಯ ಎದುರಾಳಿ ಎಂಟಿಬಿ ನಾಗರಾಜ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಆದರೂ ಒಬ್ಬರ ಮುಖ ಒಬ್ಬರು ನೋಡದೇ ಕುದಿಮೌನ ಪ್ರದರ್ಶಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ಸಂಸದ‌ ಬಚ್ಚೇಗೌಡ ಹಾಗೂ ಅವರ ರಾಜಕೀಯ ಎದುರಾಳಿ ಎಂಟಿಬಿ ನಾಗರಾಜ್ ಪರಸ್ಪರ ಮುಖಾಮುಖಿಯಾಗಿದ್ದಾರೆ. ಆದರೂ ಒಬ್ಬರ ಮುಖ ಒಬ್ಬರು ನೋಡದೇ ಕುದಿಮೌನ ಪ್ರದರ್ಶಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ‌ ಬಿಎಸ್ವೈ ನಿವಾಸ ಧವಳಗಿರಿಗೆ ಸಂಸದ ಬಚ್ಚೇಗೌಡ ಭೇಟಿ ನೀಡಿದ್ದರು. ಬಚ್ಚೇಗೌಡ ಯಡಿಯೂರಪ್ಪ ಅವರ ಹುಟ್ಟಿದ ಹಬ್ಬಕ್ಕೆ ಶುಭ ಕೋರಿದರು. ಉಪ ಚುನಾವಣೆಯಲ್ಲಿ ಪುತ್ರನ ಸ್ಪರ್ಧೆ ತಪ್ಪಿಸಲು ವಿಫಲವಾದ ನಂತರ ತುಸು ಅಂತರ ಕಾಯ್ದುಕೊಂಡಿದ್ದ  ಬಚ್ಚೇಗೌಡರ ಇಂದು ಸಿಎಂ ಜೊತೆ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು.

ಈ ವೇಳೆ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಕೂಡ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದರು. ಎಂಟಿಬಿ ಬರುತ್ತಿದ್ದಂತೆ‌ ಬಚ್ಚೇಗೌಡ ಸಿಎಂ ನಿವಾಸದಿಂದ ನಿರ್ಗಮಿಸಿದರು. ಈ ವೇಳೆ ಇಬ್ಬರು ಪರಸ್ಪರ ಎದುರುಬದುರಾದರೂ ಮಾತುಕತೆ ನಡೆಸದೇ ಕುದಿಮೌನ ಹೊರಹಾಕಿದ್ದಾರೆ.

ಬಚ್ಚೇಗೌಡ ನಿರ್ಗಮನದ ನಂತರ ಯಡಿಯೂರಪ್ಪ ಜೊತೆ ಎಂಟಿಬಿ ನಾಗರಾಜ್ ಮಾತುಕತೆ ನಡೆಸಿದರು. ನಿನ್ನೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭ ಕೋರಿದ್ದರೂ ಇಂದು ಮತ್ತೊಮ್ಮೆ ಭೇಟಿಯಾಗಿದ್ದರು. ಬಜೆಟ್ ನಂತರ ಸಂಪುಟ‌ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಯಲ್ಲಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಎಂ.ಟಿ.ಬಿ. ನಾಗರಾಜ್ ಮಾತುಕತೆ ನಡೆಸಿದರು ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!