ರಾಜಕೀಯ

ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಉಗ್ರ ಸಂಘಟನೆಗಳು: ನೈಜ ಮುಸ್ಲಿಂರು ತೊಡಗಿಸಿಕೊಂಡಿಲ್ಲ- ಕಟೀಲ್ 

Nagaraja AB

ಮಂಗಳೂರು: ದೇಶಾದ್ಯಂತ ನಡೆಯುತ್ತಿರುವ ಪೌರತ್ವ ತಿದ್ದುಪಡಿ ವಿರುದ್ಧದ ಪ್ರತಿಭಟನೆಯಲ್ಲಿ ಉಗ್ರ ಸಂಘಟನೆಗಳು ಭಾಗಿಯಾಗಿದ್ದು, ನೈಜ ಮುಸ್ಲಿಂರು  ತೊಡಗಿಸಿಕೊಂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ನಿಜವಾದ ಮುಸ್ಲಿಂರು ಪ್ರತಿಭಟನೆಯಲ್ಲಿ ತೊಡಗಿಲ್ಲ, ಆದರೆ, ನಕ್ಸಲೀಯರು, ಚಿಂತಕರು, ಹಾಗೂ ಉಗ್ರ ಸಂಘಟನೆಗಳು ಪ್ರತಿಭಟನೆಯಲ್ಲಿ ತೊಡಗಿವೆ ಎಂದು ಹೇಳಿದರು. 

ದೇಶದಲ್ಲಿ  ಹಿಂಸಾಚಾರ ಉಂಟು ಮಾಡುವ ಉದ್ದೇಶದಿಂದ ಪ್ರತಿಪಕ್ಷಗಳು ಸುಳ್ಳನ್ನು  ಹಬ್ಬುತ್ತಿವೆ. ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ವಿರುದ್ಧ ಪ್ರತಿಭಟಿಸಲು ಪ್ರತಿಪಕ್ಷಗಳಿಗೆ ಯಾವುದೇ ವಿಷಯಗಳಿಲ್ಲ. ಅದಕ್ಕಾಗಿ ಅವರು ಕಾಯುತ್ತಾ ಕುಳಿತಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿ, ರಾಮಜನ್ಮಭೂಮಿ ವಿಷಯಗಳು ಹಿಂದೂ ಮುಸ್ಲಿಂರ ನಡುವೆ ಹಿಂಸಾಚಾರಕ್ಕೆ ಕಾರಣವಾಗುತ್ತದೆ ಎಂದುಕೊಂಡಿದ್ದರು. ಆದರೆ, ಅವುಗಳು ಯಾವುದೇ ಅಸ್ತ್ರವಾಗದಿದ್ದಾಗ ಸಿಎಎನ್ನು ತೆಗೆದುಕೊಂಡಿದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು. 
 

SCROLL FOR NEXT