ರಾಜಕೀಯ

ಭಾರತ 'ಅಖಂಡ ಭಾರತ' ಆಗುವ ಸಮಯ ದೂರವಿಲ್ಲ: ಸಂಸದ ನಾರಾಯಣಸ್ವಾಮಿ

Raghavendra Adiga

ಚಿತ್ರದುರ್ಗ: ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ವಿವಾದಿತ ಹೇಳಿಕೆಯಬೆನ್ನಿಗೇ ಇದೀಗ ಚಿತ್ರದುರ್ಗ ಸಂಸದ  ಎ ನಾರಾಯಣಸ್ವಾಮಿ ಅವರು ಬಿಜೆಪಿಯ "ಅಖಂಡ ಭಾರತ" ಕನಸು ನನಸಾಗುವ ದಿನ ದೂರವಿಲ್ಲ ಎನ್ನುವ ಮೂಲಕ ಇನ್ನೊಂದು ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಂಸದ "ಹಿಂದುತ್ವ ಸಿದ್ದಾಂತವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಸಾರ್ವಜನಿಕರನ್ನು ಸೆಳೆಯುತ್ತಿದೆ.ಮತ್ತು ಅವರು ಸಹ ನಮ್ಮೊಡನೆ ಸೇರಿಕೊಳ್ಳಲು ಪ್ರೇರಿತರಾಗುತ್ತಿದ್ದಾರೆ" ಎಂದರು.ನಮ್ಮ ದೇಶ ಅಖಂಡ ಭಾರತ ಆಗುವ ದಿನ ದೂರವಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಮಂಗಳೂರು ವಿಮಾನ ನಿಲ್ದಾಣದ ಬಾಂಬ್ ಪ್ರಕರಣ ಪೊಲೀಸರ ಅಣಕು ಪ್ರದರ್ಶನ ಎಂದ ಮಾಜಿ ಸಿಎಂ  ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗೆಗೆ ವಿವರಿಸಿದ ಸಂಸದರು ಅವರೂ ಕೂಡ ಹಿಂದೆ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರು. ಅವರು ಇಂತಹಾ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ. ಅಲ್ಲದೆ ಇಂತಹಾ ಹೇಳಿಕೆ ಉತ್ತಮ ಅಭಿರುಚಿಯನ್ನು ಹುಟ್ಟಿಸುವುದಿಲ್ಲಪೊಲೀಸರ ಸ್ಥೈರ್ಯವನ್ನು ಕಡಿಮೆ ಮಾಡಲಿದೆ ಎಂದರು. ಕಾಂಗ್ರೆಸ್ ಮತ್ತು ಜೆಡಿ (ಎಸ್ ಎರಡೂ ಪಕ್ಷಗಳು ರೂ ಪಾಕಿಸ್ತಾನದ ಏಜೆಂಟರಾಗಿ ಕಾರ್ಯನಿರ್ವಹಿಸುತ್ತಿದ್ದು, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದಲ್ಲಿ ತನ್ನ ಕೃತ್ಯವನ್ನು ಒಪ್ಪಿಕೊಂಡ ಆದಿತ್ಯ ರಾವ್  ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯಕೀಯ ವರದಿ ಬಂದ ಬಳಿಕವೇ ತೀರ್ಮಾನ ಮಾಡಬೇಕಿದೆಎಂದು ಅವರು ಹೇಳಿದರು.

ಬಿಜೆಪಿಗೆ ಆದಿತ್ಯ ರಾವ್ ಅವರೊಂದಿಗೆ ಸಂಬಂಧವಿದೆ ಎಂಬ ಆರೋಪವನ್ನು ನಾರಾಯಣಸ್ವಾಮಿ  ತಳ್ಳಿ ಹಾಕಿದ್ದು ಯಾರೇ ಅಪರಾಧಿಗಳಾದರೂ ಅವರಿಗೆ ಯಾವ ದಯೆತೋರದೆ ಶಿಕ್ಷೆ ವಿಧಿಸಬೇಕು.ಅಲ್ಲದೆ ಬಾಂಬ್ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬೇಧಿಸಿದ್ದ ಕರ್ನಾಟಕ ಪೋಲೀಸರಿಗೆ ಅಭಿನಂದಿಸಬೇಕು ಎಂದು ಅವರು ಹೇಳಿದರು.

SCROLL FOR NEXT