ರಾಜಕೀಯ

ಶಾಸಕರ ಬೆಂಬಲ 'ಕತ್ತಿ'ಗೊ ಅಥವಾ 'ಕೋರೆ'ಗೊ?: ಒಡೆದ ಮನೆಯಾದ ಬಿಜೆಪಿ!

Shilpa D

ಬೆಳಗಾವಿ: ರಾಜ್ಯಸಭೆ ಚುನಾವಣೆ ಚಟುವಟಿಕೆಗಳು ಗರಿಗೆದರಿದ ಬೆನ್ನಲ್ಲೆ ಬಿಜೆಪಿಯ ಹಲವು ನಾಯಕರು ಹೇಳಿಕೆ ನೀಡುತ್ತಿದ್ದಾರೆ.

ರಾಜ್ಯಸಭೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ನಮ್ಮ‌ ಅನಿಸಿಕೆಯನ್ನ ಪಕ್ಷದ ನಾಯಕರಿಗೆ ಹೇಳಿದ್ದೇವೆ. ಅದನ್ನ ನಾನು ಬಹಿರಂಗವಾಗಿ ಹೇಳುವುದಿಲ್ಲ ಎಂದರು. ರಾಜ್ಯಸಭೆಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನೋದನ್ನ ಬಿಜೆಪಿ ತೀರ್ಮಾನ ಮಾಡಲಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ರಾಜ್ಯಸಭೆ ಚುನಾವಣೆ ಟಿಕೆಟ್ ಗಾಗಿ ರಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ನಡುವೆ ಪೈಪೋಟಿ ಏರ್ಪಟ್ಟಿದೆ, ಟಿಕೆಟ್ ಗಾಗಿ ಯಾರೂ ಲಾಬಿ ನಡೆಸಿಲ್ಲ, ಇದಕ್ಕಾಗಿ ಶಾಸಕರು ಇಬ್ಭಾವಾಗಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ಉಮೇಶ್ ಕತ್ತಿ ಮತ್ತು ಅವರ ಸಹೋದರ ರಮೇಶ್ ಕತ್ತಿ ಇಬ್ಬರು ಇತ್ತೀಚೆಗೆ ಬೆಂಗಳೂರಿನಲ್ಲಿ ಶಾಸಕರ ಸಭೆ ನಡೆಸಿದ್ದರು. ಶಾಸಕರನ್ನು ಊಟಕ್ಕಾಗಿ ಆಹ್ವಾನಿಸಿದ್ದರು ಅಷ್ಟೇ, ಅಲ್ಲಿ ಯಾವುದೇ ರಾಜಕೀ ಬೆಳವಣಿಗೆಗಳು ನಡೆದಿಲ್ಲ ಎಂದು ಜಾರಕಿಹೊಳಿ ಹೇಳಿದ್ದರು.

ರಮೇಶ್ ಜಾರಕಿಹೊಳಿ ಕತ್ತಿ ಸಹೋದರರ ಬೆಂಬಲಕ್ಕೆ ನಿಂತಿದ್ದಾರೆ. ಲಕ್ಷ್ಮಣ ಸವದಿ ನೇತೃತ್ವದ ಮತ್ತೊಂದು ಗುಂಪು ಪ್ರಭಾಕರ್ ಕೋರೆ ಬೆಂಬಲಕ್ಕೆ ನಿಂತಿದೆ, ಮುಂಬಯಿ-ಕರ್ನಾಟಕದ ಅತಿ ದೊಡ್ಡ ಸಂಖ್ಯೆಯ ಲಿಂಗಾಯತ ಬಿಜೆಪಿ ಶಾಸಕರು ಈ ವಿಚಾರವಾಗಿ ಇಬ್ಬಾಗವಾಗಿದೆ ಎಂದು ಹೇಳಲಾಗುತ್ತಿದೆ.

ಆದರೆ ಪಕ್ಷದ ಮುಖಂಡರು ಎರಡು ಗುಂಪಿನವರು ಸಮ್ಮತಿಸುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಲು ಯತ್ನಿಸುತ್ತಿದ್ದಾರೆ.  ಆದರೆ ತಮ್ಮನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ ಎಂಬುದನ್ನು ಮನಗಂಡಿರುವ ಕತ್ತಿ ಸಹೋದರರು, ರಾಜ್ಯ ಸಭೆ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದಾರೆ. ತಮಗೆ ಸಚಿವ ಸ್ಥಾನವನ್ನೂ ನೀಡಿಲ್ಲ ಕೊನೇ  ಪಕ್ಷ ರಾಜ್ಯ ಸಭೆ ಟಿಕೆಟ್  ನೀಡಬೇಕೆಂದು ಒತ್ತಾಯಿಸಿದ್ದಾರೆ.

SCROLL FOR NEXT