ನಿಸರ್ಗ ಗೋವಿಂದರಾಜು 
ರಾಜಕೀಯ

ಪರಿಷತ್ ಚುನಾವಣೆ: ಕೋಲಾರದ ಉದ್ಯಮಿ ಗೋವಿಂದರಾಜುಗೆ ಜೆಡಿಎಸ್ ಟಿಕೆಟ್

 ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಕೋಲಾರದ ಉದ್ಯಮಿ ನಿಸರ್ಗ ಗೋವಿಂದರಾಜ್ ಸಫಲರಾಗಿದ್ದಾರೆ. 

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಕೋಲಾರದ ಉದ್ಯಮಿ ನಿಸರ್ಗ ಗೋವಿಂದರಾಜ್ ಸಫಲರಾಗಿದ್ದಾರೆ. 

ಪಕ್ಷದ ವರಿಷ್ಢ ಎಚ್. ಡಿ‌.ದೇವೇಗೌಡ ಅವರು ಗೋವಿಂದರಾಜ್‌ಗೆ ಬಿ ಫಾರಂ ನೀಡಿದ್ದಾರೆ. ಟಿ.ಎ.ಶರವಣ ಅವರಿಂದ ತೆರವಾಗುತ್ತಿರುವ ಸ್ಥಾನವನ್ನು ಗೋವಿಂದರಾಜ್ ತುಂಬಲಿದ್ದಾರೆ. ಶರವಣ ಅವರಲ್ಲದೆ, ಕುಪೇಂದ್ರ ರೆಡ್ಡಿ ಮತ್ತು ಕಬಡ್ಡಿ ಬಾಬು ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸಿದ್ದರು.

ಕೋಲಾರ ಜಿಲ್ಲೆಯಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿಪಾಸ್ತಿ ಹೊಂದಿರುವ ಗೋವಿಂದರಾಜು ಪ್ರಸ್ತುತ ಉದ್ಯಮಿಯಾಗಿದ್ದಾರೆ. ಹಲವು ವರ್ಷಗಳಿಂದ ಜೆಡಿಎಸ್ ಪಕ್ಷದ ಬೆನ್ನೆಲುಬಾಗಿ ಇದ್ದುಕೊಂಡು, ಪಕ್ಷದ ಮುನ್ನೆಲೆಗೆ ಬಾರದೆ, ಕಾರ್ಯಕರ್ತನೂ ಆಗದೆ ಸಲಹೆ ಸೂಚನೆ, ಹಾಗು‌ ಆರ್ಥಿಕವಾಗಿ ಜಿಲ್ಲೆಯಲ್ಲಿ ಎಲ್ಲಾ ಮುಖಂಡರಿಗೂ ಬೆಂಬಲ ನೀಡುತ್ತಾ
ಬಂದಿದ್ದಾರೆ. ಹೀಗೆ ಪಕ್ಷದ ಅಭಿವೃದ್ಧಿಗೆ ಶ್ರಮಿಸಿ ವರಿಷ್ಠರ ಕಡೆಯಿಂದಲೂ ವಿಶ್ವಾಸ ಗಿಟ್ಟಿಸಿಕೊಂಡಿದ್ದಾರೆ. ಅದಕ್ಕೆ ಬಯಸದೇ ಇದ್ದರೂ ಕರೆದು ಟಿಕೆಟ್ ಕೊಡಲಾಗಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ