ಡಿಕೆ ಶಿವಕುಮಾರ್ 
ರಾಜಕೀಯ

ಡಿಕೆ ಶಿವಕುಮಾರ್ ಟೆಂಪಲ್ ರನ್ ಗೆ ಒಲಿದ ದೇವರು: ಫಲಿಸಿತು ಹರಕೆ, ದೇವಾನುದೇವತೆಗಳ ಹಾರೈಕೆ!

ಕಳೆದ ತಿಂಗಳ ನಾಲ್ಕು ವಾರಗಳೂ ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್  ಸ್ಥಳೀಯ ಹಾಗೂ ಹೊರಗಿನ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಹಲವು ಹರಕೆ ಸಲ್ಲಿಸಿದ್ದರು.

ಬೆಂಗಳೂರು: ಕಳೆದ ತಿಂಗಳ ನಾಲ್ಕು ವಾರಗಳೂ ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್  ಸ್ಥಳೀಯ ಹಾಗೂ ಹೊರಗಿನ ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆದು ಹಲವು ಹರಕೆ ಸಲ್ಲಿಸಿದ್ದರು.

ವಿಶೇಷ ಎಂದರೇ  ಡಿಕೆ ಶಿವಕುಮಾರ್  ಭೇಟಿ ನೀಡಿದ್ದು ಬಹುತೇಕ ಹೆಣ್ಣು ದೇವತೆಗಳ ದೇವಾಸ್ಥಾನಗಳೇ ಆಗಿವೆ. 50 ದಿನಗಳ ಜೈಲುವಾಸದ ನಂತರ  ಅಕ್ಟೋಬರ್ 2019ರಲ್ಲಿ ಶಿವಕುಮಾರ್ ಅವರಿಗೆ ಜಾಮೀನು ಸಿಕ್ಕಿತು.  ಅದಾದ ನಂತರ ಅವರು ತಮ್ಮ ಕುಟುಂಬದ ಜೊತೆಗೆ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.

ಹೊಸದಾಗಿ ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಶಿವಕುಮಾರ್, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ಕಲಬುರಗಿ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಹಲವು ದೇವಾಲಯಗಳಿಗೆ ಭೇಟಿ ನೀಡಿದ್ದರು.

ಇದಲ್ಲದೇ ಕರಾವಳಿ ಕರ್ನಾಟಕ ಭಾಗದ ದೇವಾಸ್ಥಾನಗಳಿಗೂ ತೆರಳಿ ದರ್ಶನ ಪಡೆದಿದ್ದರು. 2019ರ ನವೆಂಬರ್ ನಲ್ಲಿ ಶಿವಕುಮಾರ್ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿದ್ದರು, ಬರಿಗಾಲಿನಲ್ಲಿ ಬೆಟ್ಟ ಹತ್ತಿ  101 ತೆಂಗಿನಕಾಯಿ ಒಡೆದಿದ್ದರು.  ಜೊತೆಗೆ ನಂಜುಂಡೇಶ್ವರ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ಹಾಗೂ ಮಂಡ್ಯದ ಕಾಳಿಕಾಂಬ, ಮದ್ದೂರಿನ ಮದ್ದೂರಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದರು.

ಈ ವರ್ಷದ ಜನವರಿಯಲ್ಲಿ  ಶಿವಕುಮಾರ್ ತುಮಕೂರಿನ ವಿದ್ಯಾ ಚೌಡೇಶ್ವರಿ ದೇವಾಲಕ್ಕೆ ಭೇಟಿ ನೀಡಿ ಚಂಡಿಕಾ ಯಾಗ ನಡೆಸಿದ್ದರು.

ತಮ್ಮ ತವರು ಜಿಲ್ಲೆ ಕನಕಪುರದ ಕಬ್ಬಾಳಮ್ಮ ಮತ್ತು ಕೆಂಚೀರಮ್ಮ ದೇವಾಲಯಗಳಿಗೆ ತೆರಳಿದ್ದರು. ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಸರ್ಕಲ್ ಮಾರಮ್ಮ ದೇವಾಲಯಕ್ಕೆ ತೆರಳಿ ನಾಣ್ಯಗಳನ್ನು ದಾನ ಮಾಡಿದ್ದರು. 

ಶೃಂಗೇರಿಯ ಶಾರದಾಂಬೆ ದೇವಾಸ್ಥಾನಕ್ಕೆ ತಮ್ಮ ಪತ್ನಿಯೊಂದಿಗೆ ತೆರಳಿ ತಮ್ಮ ಜ್ಯೋತಿಷಿಗಳ ಮಾರ್ಗದರ್ಶನದಂತೆ  ಗೋದಾನ ಮಾಡಿದ್ದರು. 

ಕರ್ನಾಟಕ ಮಾತ್ರವಲ್ಲದೇ  ಗ್ವಾಲಿಯರ್ ನ ಧೂಮವತಿ, ಬಾಗಲಮುಖಿ ದೇವಾಲಯ, ತಮಿಳುನಾಡಿ ನ ಕಂಚಿ ಕಾಮಾಕ್ಷಿ ದೇವಾಸ್ಥಾನಕ್ಕೆ ಭೇಟಿ ನೀಡಿದ್ದರು. ಶಿವಕುಮಾರ್ ಜೈಲಿಗೆ ತೆರಳುವ ಮುನ್ನವೇ ದೇವಾಲಯಗಳಿಗೆ ಹೋಗಬೇಕಿತ್ತು,  ಆದರೆ ಸಾಧ್ಯವಾಗಲಿಲ್ಲ, ಅದಾದ  ನಂತರ ಭೇಟಿ ನೀಡಿ ಹರಕೆ ಪೂರೈಸಿದ್ದರು. ಈಗ ಅದಕ್ಕೆ ನ್ಯಾಯ ಸಿಕ್ಕಿದೆ, ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT