ಸಾಂದರ್ಭಿಕ ಚಿತ್ರ 
ರಾಜಕೀಯ

ರೋಚಕ ಘಟಕ್ಕೆ ತಲುಪಿದ ಶಿರಾ ಕ್ಷೇತ್ರದ ಉಪ ಚುನಾವಣೆ: ಬಿಜೆಪಿಯ ರಾಜೇಶ್ ಗೌಡಗೆ ಹೆಚ್ಚಿನ ಒಲವು ಸಾಧ್ಯತೆ

ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯದ ಅಬ್ಬರ ಪ್ರಚಾರ, ಆರೋಪ, ಪ್ರತ್ಯಾರೋಪಗಳಿಗೆ ತಾತ್ಕಾಲಿಕ ತೆರೆ ಬಿದ್ದಿದ್ದು ಇನ್ನೇನಿದ್ದರೂ ಮತದಾನ ಮುಗಿದು ಮತ ಎಣಿಕೆಯವರೆಗೆ ವಿರಾಮವೆನ್ನಬಹುದು.

ಶಿರಾ: ಉಪ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಕಳೆದೊಂದು ತಿಂಗಳಿನಿಂದ ನಡೆಯುತ್ತಿದ್ದ ರಾಜಕೀಯದ ಅಬ್ಬರ ಪ್ರಚಾರ, ಆರೋಪ, ಪ್ರತ್ಯಾರೋಪಗಳಿಗೆ ತಾತ್ಕಾಲಿಕ ತೆರೆ ಬಿದ್ದಿದ್ದು ಇನ್ನೇನಿದ್ದರೂ ಮತದಾನ ಮುಗಿದು ಮತ ಎಣಿಕೆಯವರೆಗೆ ವಿರಾಮವೆನ್ನಬಹುದು.

ಶಿರಾ ಕ್ಷೇತ್ರ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮೂರೂ ಪಕ್ಷಗಳಿಗೂ ಬಹಳ ಮುಖ್ಯವಾಗಿದೆ. ಜೆಡಿಎಸ್ ನ ಬಿ ಸತ್ಯನಾರಾಯಣ ಅವರು ಶಾಸಕರಾಗಿದ್ದ ಕ್ಷೇತ್ರ ಅವರ ಅಕಾಲಿಕ ನಿಧನದಿಂದ ತೆರವಾಯಿತು. ಕಳೆದ ಬಾರಿ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ ಬಿ ಜಯಚಂದ್ರ ವಿರುದ್ಧ 10 ಸಾವಿರದ 365 ಮತಗಳ ಅಂತರದಲ್ಲಿ ಗೆದ್ದಿದ್ದರು.

ಈ ಬಾರಿ ಜೆಡಿಎಸ್ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಿದೆ. ಆದರೆ ಅನುಕಂಪದ ಮತ ಅವರಿಗೆ ಸಿಗುವ ಸಾಧ್ಯತೆ ತೀರಾ ಕಡಿಮೆ. ಅವರಿಗೆ ಕೊರೋನಾ ಪಾಸಿಟಿವ್ ಬಂದು ಪ್ರಚಾರಕ್ಕೆ ಸಹ ತಡವಾಗಿ ಸೇರ್ಪಡೆಯಾದರು. ನಿನ್ನೆ ಬಹಿರಂಗ ಪ್ರಚಾರಕ್ಕೆ ಹೋಗಿದ್ದ ಅಮ್ಮಾಜಮ್ಮ ತಮ್ಮ ಸೀರೆಯ ಸೆರಗೊಡ್ಡಿ ಜನರಲ್ಲಿ ಮತಭಿಕ್ಷೆ ಕೇಳಿದ್ದರು.

ಕ್ಷೇತ್ರದಲ್ಲಿ ಸುಮಾರು 22 ಸಾವಿರ ಮಂದಿ ಮುಸ್ಲಿಂ ಮತದಾರರಿದ್ದಾರೆ. ಅವರ ಮತ ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಶತಪ್ರಯತ್ನ ಮಾಡಿದೆ. ಜೆಡಿಎಸ್ ನಾಯಕ ಹೆಚ್ ಡಿ ದೇವೇಗೌಡ ಈ ಮತಗಳ ಮೇಲೆ ಕಣ್ಣಿಟ್ಟು ಪ್ರಚಾರ ನಡೆಸಿದ್ದಾರೆ.ಆದರೆ ಈ ಬಾರಿ ಕಾಂಗ್ರೆಸ್ ಗೆ ಮುಸ್ಲಿಂ ಮತದಾರರು ಮತ ಹಾಕುವ ಸಾಧ್ಯತೆಯಿದೆ. ಕೇವಲ ಶೇಕಡಾ 30ರಷ್ಟು ಮಂದಿ ಜೆಡಿಎಸ್ ಗೆ ಬೆಂಬಲ  ನೀಡಬಹುದು ಎಂದು ಸಮುದಾಯ ಮುಖಂಡ ಟೌಸಿಫ್ ಹೇಳುತ್ತಾರೆ.

2018ರಲ್ಲಿ 16 ಸಾವಿರದ 959 ಮತಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಗೆಲುವಿಗೆ ಹಾತೊರೆಯುತ್ತಿದೆ. ಸ್ವತಃ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರೇ ಹೋಗಿ ಪ್ರಚಾರ ನಡೆಸಿ ಬಂದಿದ್ದಾರೆ. ಎಲ್ಲಾ ಮೂರೂ ಪಕ್ಷಗಳ ಅಭ್ಯರ್ಥಿಗಳು ಕುಂಚಟಿಗ-ಒಕ್ಕಲಿಗ ಸಮುದಾಯದವರು. 59 ಸಾವಿರ ಒಕ್ಕಲಿಗ ಮತದಾರರಿದ್ದಾರೆ, ಅವರಲ್ಲಿ ಬಹುತೇಕ ಮತಗಳು ಜೆಡಿಎಸ್ ಗೆ ಹೋಗಬಹುದು.

ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುನ್ನ ರಾಜ್ಯ ಸರ್ಕಾರ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವುದನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ಘೋಷಿಸಿತ್ತು ಎಂದು ಹೇಳಬಹುದು. ಶೇಕಡಾ 40 ಮಂದಿ ಬಿಜೆಪಿ ಬೆಂಬಲಿಸಬಹುದು, ಉಳಿದ ಮತಗಳು ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಹಂಚಿಕೆಯಾಗಬಹುದು ಎನ್ನುತ್ತಾರೆ ಸಮುದಾಯದ ಈರಣ್ಣ ಹೇಳುತ್ತಾರೆ.

ಇನ್ನು 11 ಸಾವಿರದಷ್ಟು ಪರಿಶಿಷ್ಟ ಜಾತಿ ಮತದಾರರು ಇಷ್ಟು ವರ್ಷ ಕಾಂಗ್ರೆಸ್ ಬೆಂಬಲಿಸುತ್ತಿದ್ದವರು ಈ ಬಾರಿ ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆಯಿದೆ, ಹೀಗಾಗಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಯಿದೆ. ಸುಮಾರು 18 ಸಾವಿರ ಮಂದಿ ಕುರುಬರು ಟಿ ಬಿ ಜಯಚಂದ್ರ ಅವರ ಪರ ಮತ ಹಾಕುವ ಸಾಧ್ಯತೆಯಿದ್ದು ಸಿಎಲ್ ಪಿ ನಾಯಕ ಸಿದ್ದರಾಮಯ್ಯನವರ ಪ್ರಭಾವ ಬೀರುವ ಸಾಧ್ಯತೆಯಿದೆ. ನಾಯಕ, ಪರಿಶಿಷ್ಟ ಪಂಗಡಗಳ ಮತಗಳು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಿಭಜನೆಯಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT