ರಾಜಕೀಯ

ಬೆಳಗಾವಿ: ಡಿಸಿಸಿ ಬ್ಯಾಂಕ್ ಚುನಾವಣೆಗೂ ರೆಸಾರ್ಟ್ ಪಾಲಿಟಿಕ್ಸ್ ನಂಟು!

Shilpa D

ಬೆಂಗಳೂರು: ನವೆಂಬರ್ 6 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಖಾನಾಪುರ ಕ್ಷೇತ್ರ ವ್ಯಾಪ್ತಿಗೆ ಬರುವ ವಿವಿಧ ಸಹಕಾರ ಸಂಘಗಳ ಸುಮಾರು 278 ಸದಸ್ಯರನ್ನು ಬೆಳಗಾವಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಮಹಾರಾಷ್ಟ್ರದ ರೆಸಾರ್ಟ್ ಗೆ ಕರೆದೊಯ್ದಿದ್ದಾರೆ.

ಡಿಸಿಎಂ ಲಕ್ಷ್ಮಣ ಸವದಿ ಮತ್ತು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಡಿಸಿಸಿ ಬ್ಯಾಂಕಿನ ಎಲ್ಲಾ 16 ಕ್ಷೇತ್ರಗಳಲ್ಲಿ ಚುನಾವಣೆಯನ್ನು ಅವಿರೋಧವಾಗಿ ಖಚಿತಪಡಿಸಿಕೊಳ್ಳಲು ಇದು ಹೆಣಗಾಡುತ್ತಿದೆ.

ಎಂಇಎಸ್ ನ ಅರವಿಂದ್ ಪಾಟೀಲ್ ಮತ್ತು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರ ಜೊತೆಗೆ ಬಿಜೆಪಿ ಕೈ ಜೋಡಿಸುವ ನಿರ್ಧಾರದ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ ಯಾವಾಗಲೂ ಕರ್ನಾಟಕ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದೆ, ಕನ್ನಡ ರಾಜ್ಯೋತ್ಸವದಂದು ಕಪ್ಪು ದಿನಾಚರಣೆ ಆಚರಿಸುತ್ತದೆ, ಅಂತಹ ನಾಯಕರನ್ನು ಬೆಂಬಲಿಸುವ ಮುನ್ನ ಬಿಜೆಪಿ ಎರಡು ಬಾರಿ ಯೋಚಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.

ಅರವಿಂದ ಪಾಟೀಲ್ ಗೆ 25 ಸದಸ್ಯರ ಬೆಂಬಲ ಬೇಕಾಗಿದೆ, ಕಳೆದ ಮೂರು ವರ್ಷಗಳಿಂದ ಈ ಹುದ್ದೆಯನ್ನು ತಡೆಹಿಡಿಯಲಾಗಿದೆ.

ಅಂಜಲಿ ನಿಂಬಾಳ್ಕರ್ ಕ್ಯಾಂಪ್ ನಲ್ಲಿರುವ ನಾಲ್ಕು ಸದಸ್ಯರ ಬೆಂಬಲ ಪಡೆಯಲು ಪಾಟೀಲ್ ಯತ್ನಿಸುತ್ತಿದ್ದಾರೆ, ಆದರೆ ಪಾಟೀಲ್ ವಿರುದ್ಧ ಗೆಲ್ಲುವುದಾಗಿ ಅಂಜಲಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ನವೆಂಬರ್ 6 ರಂದು ತಮ್ಮ ತಂಡದೊಂದಿಗೆ ನಿಂಬಾಳ್ಕರ್ ಡಿಸಿಸಿ ಬ್ಯಾಂಕ್ ಚುನಾವಣೆಗೆ ಆಗಮಿಸಲಿದ್ದಾರೆ.

SCROLL FOR NEXT