ರಾಜಕೀಯ

ಬಿಹಾರ ಚುನಾವಣೆಯಲ್ಲಿ ಇವಿಎಂ ಹ್ಯಾಕ್ ಸಂಶಯವಿದೆ: ಡಿ.ಕೆ. ಸುರೇಶ್ 

Nagaraja AB

ಬೆಂಗಳೂರು: ಬಿಹಾರ ಚುನಾವಣೆಯಲ್ಲಿ ಇವಿಎಂ ಮೇಲೆ ದುರ್ಬಳಕೆ ಆರೋಪ ಕೇಳಿಬರುತ್ತಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕಾದಲ್ಲಿಯೂ ಬ್ಯಾಲೆಟ್ ಪೇಪರ್ ನಡೆಯುತ್ತದೆ. ಇವಿಎಂ ಅನ್ನು ಮನುಷ್ಯರೇ ಮಾಡಿರುವುದರಿಂದ ಅದನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಚುನಾವಣೆ ಆಯೋಗ ಮೂಕಪ್ರೇಕ್ಷಕವಾಗಿದೆ ಎಂದರು. 

ಇದೇ ರೀತಿ ಆದರೆ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಲಿದೆ. ಇವಿಎಂ ರದ್ದು ಮಾಡಿ ಬ್ಯಾಲೆಟ್ ತರಬೇಕು. ಎಲ್ಲಾ ಪಕ್ಷಗಳು ಇದನ್ನು ಒತ್ತಾಯಿಸಬೇಕು. ಸುಪ್ರೀಂಕೋರ್ಟ್ ಗೆ ಪತ್ರ ಅಭಿಯಾನ ಮಾಡಬೇಕು ಎಂದರು. 

ಆರ್.ಆರ್.ನಗದಲ್ಲಿ ಕಾಂಗ್ರೆಸ್ ಹೆಚ್ಚು ಅಂತರದಿಂದ ಸೋಲಲು ಸಾಧ್ಯವಿಲ್ಲ. ವೋಟಿಂಗ್ ಪ್ಯಾಟ್ರನ್ ಚೇಂಜ್ ಆಗಿದೆ. ಬೆಂಗಳೂರಿನಲ್ಲಿ ಇವಿಎಂ ಹ್ಯಾಕ್ ಆಗಿರುವ ಸಂಶಯವಿದೆ ಡಿ.ಕೆ.ಸುರೇಶ್ ಆರೋಪಿಸಿದರು.

SCROLL FOR NEXT